Site icon Suddi Belthangady

ಕುತ್ಲೂರು ಬಜಿಲಪಾದೆಯಲ್ಲಿ ಚಿರತೆ ಪತ್ತೆ

ಬೆಳ್ತಂಗಡಿ: ತಾಲ್ಲೂಕಿನ ಕುತ್ಲೂರು ಗ್ರಾಮದ ಬಜಿಲಪಾದೆ ಸಮೀಪ ಗುರುವಾರ ರಾತ್ರಿ ಬೃಹತ್‌ ಗಾತ್ರದ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಬಜಿಲಪಾದೆ– ಮರೋಡಿ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್‌ ಸವಾರರು ಚಿರತೆಯನ್ನು ವೀಕ್ಷಿಸಿ, ಮೊಬೈಲ್‌ನಲ್ಲಿ ವಿಡಿಯೊ ಸೆರೆಹಿಡಿದಿದ್ದಾರೆ.ಕುತ್ಲೂರು, ಮರೋಡಿ ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಚಿರತೆಯೊಂದು ಸಂಚರಿಸುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version