Site icon Suddi Belthangady

ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇದರ ಮಹಿಳಾ ಶಾಖೆಯ ಉದ್ಘಾಟನೆ

ಬೆಳ್ತಂಗಡಿ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇದರ ಮಹಿಳಾ ಶಾಖೆಯು ಮೇ.24ರಂದು ಮಹಿಳಾ ಗ್ರಾಹಕರ ಸಹಕಾರ ಸಂಘದ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.

ಶಾಖಾ ಕಛೇರಿಯನ್ನು ಸುಮನಾ ಪುಷ್ಪರಾಜ್ ಶೆಟ್ಟಿ ಉಜಿರೆ ಉದ್ಘಾಟಿಸಿದರು.ವಂದನಾ ರಾಜು ಶೆಟ್ಟಿ ಬೆಂಗತ್ಯಾರು ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಭದ್ರತಾ ಕೊಠಡಿಯ ಉದ್ಘಾಟನೆಯನ್ನು ಸಂಘದ ಉಪಾಧ್ಯಕ್ಷರಾದ ಎಂ.ಜಿ ಶೆಟ್ಟಿ, ಗಣಕ ಯಂತ್ರವನ್ನು ವಸುಧಾ ಪ್ರಶಾಂತ್ ಶೆಟ್ಟಿ ಮೂಡಾಯೂರು ನೆರವೇರಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ ಇದರ ಅಧ್ಯಕ್ಷ ಎನ್.ಜಯರಾಮ ಶೆಟ್ಟಿ ವಹಿಸಿದ್ದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಲಕೃಷ್ಣ ಪೂಂಜ ಹೆಚ್, ಜಯಂತ್ ಶೆಟ್ಟಿ ಕುಂಠಿನಿ, ಅಂಬಾ ಬಿ.ಆಳ್ವ, ಎಂ.ಜಯರಾಮ್ ಭಂಡಾರಿ, ಮಂಜುನಾಥ ರೈ, ಸಾರಿಕಾ ಶೆಟ್ಟಿ, ಕೃಷ್ಣ ರೈ, ಗುರುವಾಯನಕೆರೆ ಶಾಖಾ ಪ್ರಬಂದಕರಾದ ಸಂತೋಷ್ ಶೆಟ್ಟಿ, ರಬ್ಬರ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕರಾದ ರಾಜು ಶೆಟ್ಟಿ, ಉದ್ಯಮಿ ಜಯಂತ್ ಶೆಟ್ಟಿ, ಶಾಖಾ ಪ್ರಬಂಧಕಿ ಅಖಿಲಾ ಆರ್.ಶೆಟ್ಟಿ ಉಪಸ್ಥಿತರಿದ್ದರು.

ಎಸ್.ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ಸ್ವಾಗತಿಸಿ, ಸುಜಯ್ ಶೆಟ್ಟಿ ಧನ್ಯವಾದವಿತ್ತರು.

Exit mobile version