Site icon Suddi Belthangady

ಉಜಿರೆ ಶ್ರೀ ಧ.ಮಂ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಪ್ರದರ್ಶನ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ.20ರಂದು ಅಂತಿಮ ವರ್ಷದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ನಡೆಯಿತು. ಕಾರ್ಯಕ್ರಮನ್ನು ಶ್ರೀ
ನರಸಿಂಹ ಶೆಣೈ, Senior Principal Engineer, Collins Aerospace Bangalore ಇವರು ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.

ಕೃಷಿ ಕ್ಷೇತ್ರದಲ್ಲಿ ಕೀಟನಾಶಕ ಸಿಂಪರಣೆಯು ಬ್ಯಾಟರಿ ಚಾಲಿತ ‘ಸ್ಮಾರ್ಟ್ ಸ್ಪ್ರೇಯರ್’, ಅಡಿಕೆ ಸಿಪ್ಪೆಯ ಬೂದಿಯಿಂದ ಒತ್ತಿಟ್ಟಿಗೆಯ ತಯಾರಿ, ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ, ಎಲೆಯ ಮೇಣ ಉಪಯೋಗಿಸಿ ಮನೆ ನಿರ್ಮಾಣ ಸಾಮಾಗ್ರಿಗಳ ತಯಾರಿ, ಕೈ ಸಂಜ್ಞೆಗಳಿಂದ ಚಲಿಸುವ ಕಂಪ್ಯೂಟರ್ ಮೌಸ್, ಸ್ವಯಂಚಾಲಿತ ಸೋಲಾರ್ ಪಾನಲ್ ಶುಚಿಗೊಳಿಸುವಿಕೆ, ಸ್ಮಾರ್ಟ ವಿದ್ಯುತ್ ಮೀಟರ್ ಇಂತಹ
ಹಲವು ಪ್ರಾಜೆಕ್ಟ್‌ಗಳು ವಿಶೇಷವಾಗಿ ಗಮನ ಸೆಳೆದವು.

ಈ ಸಂದರ್ಭದಲ್ಲಿ 82 ಪ್ರಾಜೆಕ್ಟ್‌ಗಳ ಪ್ರದರ್ಶನ ನಡಯಿತು. ಇದರಲ್ಲಿ ಸುಮಾರು 7 ಪ್ರಾಜೆಕ್ಟ್‌ಗಳಿಗೆ ಈ ಬಾರಿ ಕೆಯಸ್‌ಸಿಯಸ್‌ಟಿ ಅನುದಾನ ದೊರಕಿರುತ್ತವೆ.ಇದರಲ್ಲಿ ಕಂಪ್ಯೂಟರ್ ವಿಭಾಗದ ’ಕೈ ಸಂಜ್ಞೆಗಳಿಂದ ಚಲಿಸುವ ಕಂಪ್ಯೂಟರ್ ಮೌಸ್’, ಸಿವಿಲ್ ವಿಭಾಗದ ’ಎಲೆಯ ಮೇಣ ಉಪಯೋಗಿಸಿ ಮನೆ ನಿರ್ಮಾಣ ಸಾಮಾಗ್ರಿ’ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ’ಪ್ರಾಸ್ಥೆಟಿಕ್ ಆರ್ಮ’, ಪ್ರಾಜೆಕ್ಟ್‌ಗಳು ಬಹುಮಾನ ಪಡೆದುಕೊಂಡವು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಬಹುಮಾನಿತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Exit mobile version