ಬೆಳ್ತಂಗಡಿ: ಬೇಸಿಗೆ ರಜೆಯಾದ್ದರಿಂದ ಜಿಲ್ಲೆಯ ಸಂದರ್ಶಿಸಲು ಬೇರೆ ಬೇರೆ ಕಡೆಗಳಿಂದ ಪ್ರವಾಸಿಗರು ಬರುತ್ತಿರುವುದರಿಂದ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ವಾಹನ ದಟ್ಟಣೆ ಉಂಟಾಗಿದೆ.
ಮೇ.21ರಂದು ಸಂಜೆ ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ಅರುಣಾಚಲ ಪ್ರದೇಶ ನೋಂದಣಿಯ ಸಿàಪರ್ ಬಸ್ ಸಿಲುಕಿದ ಕಾರಣ ವಾಹನಗಳು ಕಿ.ಮೀ. ಗಟ್ಟಲೆ ದೂರಕ್ಕೆ ಸಾಲಿನಲ್ಲಿ ನಿಲ್ಲಬೇಕಾಯಿತು.
ಚಿಕ್ಕಮಗಳೂರಿನ ಬೈಕ್ ಸವಾರ ವಿದ್ಯಾರ್ಥಿ ಡೇನಿಯಲ್ ಹಾಗೂ ಕೆಲವು ವಾಹನ ಸವಾರರು ಸೇರಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಚಾರ್ಮಾಡಿಯಲ್ಲಿ ಘನವಾಹನ ಸಹಿತ ಸ್ಲಿಪರ್ ಬಸ್ ಸಂಚಾರಕ್ಕೆ ಅನುಮತಿ ಇಲ್ಲದಿದ್ದರೂ ಕೊಟ್ಟಿಗೆಹಾರ ಕಡೆ ಹೋಗಲು ಈ ಬಸ್ ಚಾರ್ಮಾಡಿ ಪೊಲೀಸ್ ಗೇಟ್ ಮೂಲಕವೇ ಸಂಚಾರ ನಡೆಸಿದೆ.