Site icon Suddi Belthangady

ಕಾಂಗ್ರೆಸ್ ಸರಕಾರ ರಚನೆ ಹಿನ್ನೆಲೆ: ಗೇರುಕಟ್ಟೆಯಲ್ಲಿ ಸಂಭ್ರಮದ ಆಚರಣೆ

ಕಳಿಯ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರ ರಚನೆಯಾಗಿ,ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯ ಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಮತ್ತು ಸಂಪುಟ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ಗೇರುಕಟ್ಟೆಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಸಂಭ್ರಮೋತ್ಸವ ನಡೆಯಿತು.

ನ್ಯಾಯತರ್ಪು ಕಳಿಯ ಗ್ರಾಮದ ಕೆಲವೊಂದು ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕುಣಿದು ಕುಪ್ಪಳಿಸಿ, ಸಂಭ್ರಮದ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ,ಕಾರ್ಯಕರ್ತರು ಮತದಾರರಿಗೆ ಹಣ,ಹೆಂಡ ಹಂಚುವ ಮೂಲಕ ಸರಕಾರಿ ಅಧಿಕಾರಿಗಳನ್ನು ಬಳಸಿಕೊಂಡು ತಾಲೂಕಿನಲ್ಲಿ ಜಯ ಗಳಿಸಿದರು. ಅದರೆ ರಾಜ್ಯದ ಮತದಾರರು ರಾಜ್ಯದಲ್ಲಿನ ಬಿಜೆಪಿ ಭ್ರಷ್ಟ ಸರಕಾರದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಸರಕಾರಕ್ಕೆ ಆಶೀರ್ವದಿಸಿದರು. ಕಾಂಗ್ರೆಸ್ ಪಕ್ಷದಿಂದ ಬಡವರಿಗೆ 5 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದನ್ನು ಆದಷ್ಟೂ ಬೇಗನೆ ಕಾರ್ಯ ರೂಪಕ್ಕೆ ಬರಲಿದೆ. ಅದುದರಿಂದ ನಮ್ಮ ಪಕ್ಷದ ಕಾರ್ಯಕರ್ತರು ವಿಶೇಷವಾಗಿ ಸಂಭ್ರಮಾಚರಣೆಯನ್ನು ನಡೆಸುತ್ತಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಮಾಜಿ ಸದಸ್ಯರಾದ ಪ್ರವೀಣ್ ಕುಮಾರ್ ಕೊಯ್ಯೂರು, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಜನಾರ್ದನ ಪೂಜಾರಿ ಗೇರುಕಟ್ಟೆ,ಪ್ರದೀಪ್ ಕುಮಾರ್, ಶರತ್ ಕುಮಾರ್ ಶೆಟ್ಟಿ,ಕೇಶವ ಪೂಜಾರಿ ನಾಳ, ಉಪಾಧ್ಯಕ್ಷ ಸತೀಶ್ ನಾೈಯ್,ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಲತೀಪ್ ಪರಿಮ,ಶ್ವೇತಾ ಶ್ರೀನಿವಾಸ್, ಪುಷ್ಪ ,ಮರೀಟಾ ಪಿಂಟೊ,ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕ ನೇವಿಲ್ ಸ್ಟೀವನ್ ಮೊರಾಸ್, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಗೌಡ, ಲತೀಫ್, ಪಕ್ಷದ ಪ್ರಮುಖರಾದ ಸಂಜೀವ ಬಂಗೇರ ಬಿ,ರಾಘವ ಹೆಚ್,ಹರೀಶ್ ಕುಮಾರ್ ಕೆ, ದಿನೇಶ್ ಮೂಲ್ಯ, ದಯರಾಜ್ ಗೌಡ ಹಾಗೂ ಕಳಿಯ ನ್ಯಾಯತರ್ಪು ಗ್ರಾಮದ ರಕ್ಷಿತ್ ಅಭಿಮಾನಿಗಳು,ಪಕ್ಷದ ಪ್ರಮುಖ ಕಾರ್ಯಕರ್ತರು ಅಭಿಮಾನಿಗಳು ಬಾಗವಹಿಸಿದರು. ಕಳಿಯ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕುಮಾರ್ ಬಿ,ಸ್ವಾಗತಿಸಿದರು. ಸದಸ್ಯ ಅಬ್ದುಲ್ ಕರೀಂ ಕೆ.ಎಮ್.ಧನ್ಯವಾದವಿತ್ತರು.

ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೇಸರಿ ಬಣ್ಣದ ಭಗ್ವಧ್ವಜವನ್ನು ಹಿಡಿದು ಸಂಭ್ರಮಿಸಿದ್ದು ಕೆಲವರಿಗೆ ಅಚ್ಚರಿ ಮೂಡಿಸಿದಂತ್ತಾಗಿದೆ.

Exit mobile version