Site icon Suddi Belthangady

ಮೇ.28ರಂದು ಉಜಿರೆ ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ ವತಿಯಿಂದ ಆರೋಗ್ಯ ಶಿಬಿರ

ಉಜಿರೆ: ಉಜಿರೆಯಲ್ಲಿ ಬೃಹತ್ ಮಟ್ಟದ ಉಚಿತ ಆರೋಗ್ಯ ಶಿಬಿರ ಇದೇ ಮೇ 28ರಂದು ನಡೆಯಲಿದೆ.

ಉಜಿರೆಯ ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ(ನಿ) ಪರಿಸರದ ಎಲ್ಲಾ ವರ್ಗದ ಜನರ ಆರ್ಥಿಕ ,ಸಾಮಾಜಿಕ ಸಬಲೀಕರಣಕ್ಕಾಗಿ ಕಳೆದ 12 ವರ್ಷಗಳಿಂದ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಇದರಿಂದಾಗಿ ಸಂಘವು ಜನಪ್ರಿಯವಾಗಿ ಜನರ ಮನಸ್ಸಿನಲ್ಲಿ ಉತ್ತಮ ಛಾಪು ಮೂಡಿಸಿಕೊಂಡಿದೆ.ಸಂಘದ ವತಿಯಿಂದ ಇನ್ನೂ ಹೆಚ್ಚಿನ ಸೇವೆಗಳನ್ನು ಸಮಾಜಕ್ಕೆ ನೀಡಬೇಕೆಂಬ ಆಲೋಚನೆಯಲ್ಲಿದ್ದಾಗ ನಮಗೆ ಉಚಿತ ಆರೊಗ್ಯ ಶಿಬಿರ ನಡೆಸುವ ಯೋಚನೆ ಬಂತು.”ಆರೋಗ್ಯವೇ ಭಾಗ್ಯ”ಎಂಬ ನಾಣ್ಣುಡಿಯಂತೆ ಪ್ರತೀಯೊಬ್ಬರಿಗೂ ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಅತೀ ಅಗತ್ಯವಾಗಿರುತ್ತದೆ.ಇದನ್ನು ಮನಗಂಡು ಇದೇ ಮೇ ತಿಂಗಳ 28 ನೇ ತಾರೀಕಿನಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಜಿರೆಯ ಶ್ರೀ ಜನಾರ್ಧನ ಸ್ವಾಮೀ ದೇವಸ್ಥಾನದ ಹತ್ತಿರವಿರುವ “ಕ್ರಷ್ಣಾನುಗ್ರಹ”ಸಭಾಭವನದಲ್ಲಿ ನಡೆಸಲು ಉದ್ದೇಶಿಸಿದ್ದೇವೆ.

ಈ ಶಿಬಿರವನ್ನು ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯೊಂದಿಗೆ ಮುಂಚೂಣಿಯಲ್ಲಿರುವ ಮಂಗಳೂರಿನ ಖ್ಯಾತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ನಡೆಸಿಕೊಡಲಿದ್ದಾರೆ.ಆರೋಗ್ಯ ಶಿಬಿರ ಎಂದರೆ ಆರೋಗ್ಯ ಸರಿಯಿಲ್ಲದವರು ಮಾತ್ರ ಅದರಲ್ಲಿ ಭಾಗವಹಿಸುದು ಎಂದರ್ಥವಲ್ಲ.ಪ್ರತೀಯೊಬ್ಬರೂ ತಮ್ಮ ತಮ್ಮ ಆರೋಗ್ಯ ತಪಾಸಣೆ ಮಾಡುವುದು ಅಗತ್ಯ.ಅದೂ 40 ವಯಸ್ಸು ದಾಟಿದ ಪ್ರತೀಯೊಬ್ಬ ಪುರುಷ ಮತ್ತು ಸ್ತ್ರೀ ತಪ್ಪದೇ ತಪಾಸಣೆ ಮಾಡಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ತೀರಾ ಅಗತ್ಯವಾಗಿರುತ್ತದೆ.ಪರೀಕ್ಷೆ ಮಾಡುವಾಗ ಅಗತ್ಯಬಿದ್ದಲ್ಲಿ ಮಾತ್ರ ಚಿಕಿತ್ಸೆ ಪಡೆದುಕೊಳ್ಳಬಹುದು.ಆರೋಗ್ಯ ಉತ್ತಮವಿದ್ದಲ್ಲಿ ಅದನ್ನು ಇನ್ನೂ ಉತ್ತಮವಾಗಿ ನಿರ್ವಹಿಸಲು ಸಲಹೆಗಳನ್ನು ಪಡೆದುಕೊಳ್ಲಲು,ಏನಾದರೂ ಸಣ್ಣ ಮಟ್ಟಿನ ಸಮಸ್ಸ್ಯೆಗಳು ಕಂಡು ಬಂದಲ್ಲಿ ವ್ಯಾಯಾಮ,ಯೋಗ,ಆಹಾರದ ಪತ್ಯೆ ಇತ್ಯಾದಿಗಳ ಮೂಲಕ ಅದನ್ನು ಪರಿಹರಿಸಲು ಮಾಹಿತಿಗಳು ಈ ಶಿಬಿರದಲ್ಲಿ ಉಚಿತವಾಗಿ ದೊರೆಯಲಿವೆ.ಸುಮಾರು 14 ವಿಧದ ವೈದ್ಯಕೀಯ ಪರೀಕ್ಷೆಗಳು ಲಭ್ಯವಿದ್ದು ಪ್ರತೀಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳಬಹುದು.ಈ ಶಿಬಿರವನ್ನು ಅತ್ಯುತ್ತಮವಾಗಿ ನಿರ್ವಹಿಸಲು ಸುಲಭವಾಗುವಂತೆ ಶಿಬಿರದಲ್ಲಿ ಭಾಗವಹಿಸುವ ಪ್ರತೀಯೊಬ್ಬರು ಕೂಡಲೇ ತಮ್ಮ ಹೆಸರು ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ನಿಮ್ಮ ಸಹಕಾರದ ನಿರೀಕ್ಷೆಯೊಂದಿಗೆ ವಲೇರಿಯನ್ ರೊಡ್ರಿಗಸ್,ಅಧ್ಯಕ್ಷರು ಅನುಗ್ರಹ ವಿವಿದೋದ್ಧೇಶ ಸಹಕಾರ ಸಂಘ ನಿ.ಉಜಿರೆ.

ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆಗಳು:- ಅಧ್ಯಕ್ಷರು: 9449331121(ಮುಖ್ಯಕಾರ್ಯನಿರ್ವಹಣಾಧಿಕಾರಿ) 9663612179 (ಕಛೇರಿ)9945575827, 8867065287.

ಹೆಚ್ಚಿನ ವಿವರಗಳು ಶಿಬಿರದ ಕರಪತ್ರಗಳಲ್ಲಿ ಲಭ್ಯವಿವೆ.ನೀವೂ ನೊಂದಾಯಿಸಿ.ಇತರರನ್ನೂ ನೊಂದಾಯಿಸುವಂತೆ ಮಾಡಿ.

Exit mobile version