Site icon Suddi Belthangady

ಉಜಿರೆ ಶ್ರೀ ಧ. ಮಂ. ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಕಾರ್ಯಾಗಾರ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯಲ್ಲಿ ಭೌತಶಾಸ್ತ್ರ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಮೇ 19‌ ರಂದು ಹಮ್ಮಿಕೊಳ್ಳಲಾಗಿತ್ತು.

ಮುಂದಿನ ದಿನಗಳಲ್ಲಿ ವಿವಿಧ ವಿಷಯಗಳಿಗೆ ಹಾಗೂ ವಿಚಾರಿಕ ಸಂಬಂಧ ಪಟ್ಟ ಹಲವಾರು ಕಾರ್ಯಾರಗಳಿದ್ದು ಅದರ ಮುನ್ಸೂಚನೆಯೊಂದಿಗೆ ಸರಣಿ ಕಾರ್ಯಗಾರಗಳ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ ಚಂದ್ರ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರು ಬದಲಾಗುತ್ತಿರುವ ವರ್ತಮಾನಕ್ಕೆ ಸರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸದಾ ಹೊಸತನವನ್ನು ಕಲಿಯುವ ವಾಂಚೆ ಇರಬೇಕು. ಚಟುವಟಿಕೆಗಳ ಮುಖಾಂತರ ಕಲಿತಂತಹ ವಿದ್ಯೆ ಯಾವತ್ತು ಶಾಶ್ವತವಾಗಿರುತ್ತದೆ. ಮನದಾಳಕ್ಕೆ ಇಳಿದು ಸುಲಭವಾಗಿ ಅರ್ಥವಾಗುತ್ತದೆ ಹೀಗಾಗಿ ವಿಜ್ಞಾನ ಎಂದರೆ ಪ್ರಾಯೋಗಿಕವಾಗಿ ಕಲಿಸಿದರೆ ಮಾತ್ರ ಅದು ಮಕ್ಕಳ ಮನಸ್ಸಿನೊಳಕ್ಕೆ ಇಳಿಯುತ್ತದೆ ಎಂದರು. ಈ ವಿಜ್ಞಾನ ಕಾರ್ಯಾಲಯದಲ್ಲಿ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಾಗೂ ಪ್ರಾಯೋಗಿಕ ವಿಧಾನಗಳನ್ನು ಸುಲಭವಾಗಿ ಮಕ್ಕಳಿಗೆ ಅರ್ಥೈಸುವಂತೆ ಮಾಡುವ ಚಟುವಟಿಕೆಗಳನ್ನು ಈ ಕಾರ್ಯ ಆಕಾರದ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ರವೀಶ್ ಅತ್ಯಂತ ಮಾರ್ಮಿಕವಾಗಿ ವಿವರಿಸಿದರು.

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ್ ಶೆಟ್ಟಿ, ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ವಿವಿಧ ಶಾಲಾ ಮುಖ್ಯೋಪಾಧ್ಯಾಯರುಗಳು ಹಾಗೂ ವಿಜ್ಞಾನ ಶಿಕ್ಷಕರುಗಳು ಭಾಗವಹಿಸಿದ್ದರು. ಸಹ ಶಿಕ್ಷಕಿ ಶ್ರೀಮತಿ ವೀಣಾ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯಕ್ ಸ್ವಾಗತಿಸಿದರು. ಶಾಲೆಯ ಪ್ರಾರಂಭಕ್ಕೂ ಮುನ್ನ ನಡೆಸಿದಂತಹ ಈ ಕಾರ್ಯಗಾರ ಶಿಕ್ಷಕರುಗಳಲ್ಲಿ ಹೊಸ ಚೈತನ್ಯ ಹಾಗೂ ಉತ್ಸಾಹವನ್ನು ಮೂಡಿಸಿತು ಎಂದು ಅಲ್ಲಿ ನೆರೆದ ಶಿಕ್ಷಕ ವೃಂದದ ಅಭಿಪ್ರಾಯವಾಗಿತ್ತು.

Exit mobile version