ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಇವರನ್ನು ಶೈಲೇಂದ್ರ ಯಾನೆ ಶೈಲು ಎಂಬುವವರು ತಮ್ಮ ಮೊಬೈಲ್ ವಾಟ್ಸಾಪ್‌ನ ಸ್ಟೇಟಸ್‌ನಲ್ಲಿ ರಕ್ಷಿತ್ ಶಿವರಾಂ ಇವರ ಫೋಟೋ ಹಾಕಿ “ಓಂ ಶಾಂತಿ” ಎಂದು ಬರೆದು ಸಾರ್ವಜನಿಕವಾಗಿ ಅವರ ಸಾವನ್ನು ಬಯಸುವ ಮೂಲಕ ಹಾಗೂ ವಿಜಯೋತ್ಸವದಲ್ಲಿ ಕಿಡಿಗೇಡಿಗಳು ತೀರ ಕೆಳಮಟ್ಟದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿರುವ ವೀಡಿಯೋ ಹಾಕಿ ಮಾನಹಾನಿ ಮಾಡುತ್ತಿರುವುದು ಕಂಡುಬರುತ್ತಿದೆ.ಈ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಿ ಎಂದು ರಕ್ಷಿತ್ ಶಿವರಾಂ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮಹಿಳಾ ಘಟಕ ಬೆಳ್ತಂಗಡಿ ವತಿಯಿಂದಲೂ ದೂರು ನೀಡಲಾಗಿದೆ. ದೂರನ್ನು ವೃತ್ತ ನಿರೀಕ್ಷಕರಾದ ಶಿವಕುಮಾರ್ ರವರಿಗೆ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕಾರ್ಯದರ್ಶಿ ಸೌಮ್ಯ ಲಾಯಿಲ, ಜೆಸಿಂತಾ ಮೋನಿಸ್, ತಾ.ಪಂ ಸದಸ್ಯರಾದ ವಿನುಷ ಪ್ರಕಾಶ್, ಗೋಪಿನಾಥ್ ನಾಯಕ್, ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಅಳದಂಗಡಿ, ಸಚಿನ್ ನೂಜೋಡಿ, ಸುಧೀರ್ ದೇವಾಡಿಗ, ಪೀತಂ ಶೆಟ್ಟಿ ಉಜಿರೆ, ಗೀತಾ ಬಂದಾರು, ಗಫೂರು ಪುದುವೆಟ್ಟು, ನೀಲಮ್ಮ ಪುದುವೆಟ್ಟು, ಮಧುರ ಮೇಲಂತಬೆಟ್ಟು, ಲಿಯೋ ಪಿರೆರಾ, ಸುರೇಶ್ ಸುವರ್ಣ, ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.