Site icon Suddi Belthangady

ಪೆರಿಂಜೆ: ಸಾರ ಇಬ್ರಾಹಿಂ ಫ್ಯಾಮಿಲಿ ಟ್ರಸ್ಟ್ ನಿಂದ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಪೆರಿಂಜೆ: ಪೆರಿಂಜೆ ಸಾರ ಇಬ್ರಾಹಿಂ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕುಟುಂಬದ ಸಾಧನೆಗೈದ ಸದಸ್ಯೆ ಎಸ್.ಎಸ್.ಎಲ್.ಸಿಯಲ್ಲಿ 602 ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಅಮೀನಾ ಫಾತಿಮಾ ಮತ್ತು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆಶಿಕ್ ಮರೋಡಿ ಇವರಿಗೆ ಸನ್ಮಾನ ಕಾರ್ಯಕ್ರಮ ಪೆರಿಂಜೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮೆನೇಜರ್ ಹೆಚ್.ಮಹಮ್ಮದ್ ಭಾಗವಹಿಸಿ ಮಾತನಾಡಿ ಕುಟುಂಬದ ಹಿರಿಯರು ವಿದ್ಯೆಗೆ ಬಾರಿ ಮಹತ್ವನ್ನು ಕೊಟ್ಟವರು ಆದ್ದರಿಂದ ಈ ಕುಟುಂಭದಲ್ಲಿ ಅನೇಕ ವಿದ್ಯಾವಂತರಿದ್ದು ಸರಕಾರ ಬಹುರಾಷ್ಟ್ರೀಯ ಖಾಸಗಿ ಕಂಪೆನಿಗಳಲ್ಲಿ ಹಾಗು ಕೊಲ್ಲಿ ರಾಷ್ಟ್ರಗಳಲ್ಲಿ ಉನ್ನತ ಪದವಿಯಲ್ಲಿದ್ದಾರೆ. ಆ ಮೂಲಕ ಗಳಿಸಿದ ಸಂಪತ್ತಿನಲ್ಲಿ ಸ್ವಲ್ಪ ಹಣ ಉಳಿಸಿ ಕುಟುಂಬದ ಶ್ರೇಯಸ್ಸಿಗಾಗಿ ಮತ್ತು ಉನ್ನತ ವಿದ್ಯಾಭ್ಯಾಸ ಮಾಡಲು ಸಾರಾ ಇಬ್ರಾಹಿಂ ಫ್ಯಾಮಿಲಿ ಟ್ರಸ್ಟ್ ಮೂಲಕ ಕಾರ್ಯಗತ ಮಾಡುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಟ್ರಸ್ಟ್ ನಿಯೋಜಿತ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಮತ್ತು ಹೆಚ್.ಮಹಮ್ಮದ್ ಶಾಲು ಹೊದಿಸಿ ನಗದು ನೀಡಿ ಸನ್ಮಾನಿಸಿದರು. ಹೊಸಂಗಡಿ ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್, ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ಹಾಗು ಟ್ರಸ್ಟ್ ಸದಸ್ಯೆ ಶ್ರೀಮತಿ ಬುಶ್ರಾ ಇಸ್ಮಾಯಿಲ್, ಪೆರಿಂಜೆ ಅರಬಿಕ್ ಸ್ಕೂಲ್ ನ ಅಧ್ಯಕ್ಷ ಸಾದಿಕ್ , ಖಾದರ್ ಪೆರಿಂಜೆ , ಪಿ ಸಿ ಅಬ್ದುಲ್ ಖಾದರ್ ಮಾತಾಡಿದರು.
ಪ್ರಮುಖರಾದ ಅಬೂಬಕ್ಕರ್, ಅಬ್ದುಲ್ ಹಮೀದ್, ಅಕ್ಬರ್, ಆದಿಲ್ ರಫೀಕ್ ಉದ್ದಬೆಟ್ಟು, ಮುಸ್ತಫಾ ಅಬ್ದುಲ್ ಹಮೀದ್ ಮತ್ತು ಕುಟುಬದ ಗಣ್ಯರು ಉಪಸ್ಥಿತರಿದ್ದರು.

ಟ್ರಸ್ಟ್ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಸ್ವಾಗತಿಸಿದರು.ಎಮಿರೇಟ್ ಎರ್ ಲೈನ್ಸ್ ನ ಸೂಚೆಫ್ ಹಾಗು ಟ್ರಸ್ಟ್ ನ ಮೆಂಬರ್ ಉಮರ್ ಕುಂಞ ಪೆರಿಂಜೆ ನಿರೂಪಿಸಿ ವಂದಿಸಿದರು.

Exit mobile version