ಬೆಳ್ತಂಗಡಿ: ಉಜಿರೆಯ ಟೆಕ್ಸ್ ಟೈಲ್ಸ್ ಉದ್ಯಮಿ ಪ್ರಭಾಕರ್ ಹೆಗ್ಡೆಯವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಮಹಿಳೆಯೊಬ್ಬರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಇದೊಂದು ವ್ಯವಸ್ಥಿತವಾದ ಸಂಚು, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಆರೋಪಿ, ಟೆಕ್ಸ್ ಟೈಲ್ಸ್ ಮಾಲಕ ಪ್ರಭಾಕರ್ ಹೆಗ್ಡೆ ತಿಳಿಸಿದ್ದಾರೆ.
ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ?
“ಆರೋಪಿ ಉಜಿರೆಯ ಟೆಕ್ಸ್ ಟೈಲ್ಸ್ ಉದ್ಯಮಿ ಪ್ರಭಾಕರ್ ರವರು ಕೆಲಸ ಕೊಡಿಸುವುದಾಗಿ ಹೇಳಿ, ಮನೆಯ ಪಕ್ಕದಲ್ಲೇ ರೂಂ ಮಾಡಿಸಿ ಕೊಟ್ಟಿದ್ದರು. ಇಂದು ಬೆಳಗ್ಗೆ ಕೆಲಸಕ್ಕೆ ಸೇರಬೇಕಾಗಿತ್ತು. ಬೆಳಗ್ಗೆ ಧರ್ಮಸ್ಥಳದಲ್ಲಿರುವ ತನ್ನ ಸಂಸ್ಥೆಯಲ್ಲಿ ಕೆಲಸಕ್ಕೆ ಬಿಡುವುದಾಗಿ ರೆಂಜಾಳದ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದರು. ಧರ್ಮಸ್ಥಳ ಮಾರ್ಗವಾಗಿ ಸಾಗಬೇಕಾದ ವಾಹನ ಕಕ್ಕಿಂಜೆ ಮಾರ್ಗವಾಗಿ ಹೋಗುತ್ತಿದ್ದಾಗ ಸಂಶಯ ಬಂದು ಪ್ರಶ್ನಿಸಿದಾಗ ನಿನ್ನ ಗಂಡನಿಗೂ ಹೇಗೂ ಕೆಲಸ ಕೊಟ್ಟಿದೇನೆಂದು ಹೇಳುತ್ತಾ ಲೈಂಗಿಕ ದೌರ್ಜನ್ಯ ಮತ್ತು ಅವಮಾನಕರವಾಗಿ ವರ್ತಿಸಿದ್ದಾರೆ.ಆಗ ಜೋರಾಗಿ ಬೊಬ್ಬೆ ಹೊಡೆದಾಗ ಕೆಲವರು ಅಲ್ಲಿಗೆ ಬರುವುದನ್ನು ಕಂಡು ಕಾರು ನಿಲ್ಲಿಸಿ ಇಳಿಸಿ ಹೋಗಿರುತ್ತಾರೆ” ಎಂದು ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೊಂದು ವ್ಯವಸ್ಥಿತ ಸಂಚು: ಪ್ರಭಾಕರ್ ಹೆಗ್ಡೆ
ಅವಳು ನಿನ್ನೆ ರಾತ್ರಿ ಕೆಲಸಕ್ಕೆ ಸೇರಿದ್ದು.ಗಂಡ ಹೆಂಡತಿ ಅಂತ ಹೇಳಿ ಬಂದಿದ್ದಾರೆ.ಆದರೆ ಗಂಡ ಹೆಂಡತಿ ಅಲ್ಲ. ಆತ ಚಿಕ್ಕಮಗಳೂರಿನವನು,ಆಕೆ ಉಡುಪಿಯವರು. ಮೊನ್ನೆ ಕೆಲಸ ಬೇಕೆಂದು ಕೇಳಿದರು. ಗಂಡ ಹೆಂಡತಿ ಇಬ್ಬರೂ ಬರುವುದಾದರೆ ಕಿಚನ್ ಗೆ ಕೆಲಸಕ್ಕೆ ಬೇಕು ಎಂದು ಹೇಳಿದ್ದೇನೆ. ಕಿಚನ್ ಗೆ ಕೆಲಸಕ್ಕೆ ಬೇಕು, ಹೆಂಡತಿಗೆ ಗೋಡೌನ್ ಅಥವಾ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಕೊಡುತ್ತೇನೆ ಎಂದು ಹೇಳಿದ್ದೇನೆ.ನನಗೆ ಕಿಚನ್ ಗೆ ಕೆಲಸಕ್ಕೆ ಜನ ಬೇಕಾಗಿತ್ತು. ಅದಕ್ಕಾಗಿ ಅವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದೇನೆ.ನಿನ್ನೆ ಸಂಜೆ ಬಂದು ಕೆಲಸಕ್ಕೆ ಸೇರಿದ್ದಾರೆ. ಇವತ್ತಿಂದ ಡ್ಯೂಟಿ ಸ್ಟಾರ್ಟ್. ಇವತ್ತು ಬೆಳಗ್ಗೆ ಆತ ಕಿಚನ್ ನಲ್ಲಿ ಕೆಲಸ ಸ್ಟಾರ್ಟ್ ಮಾಡಿದ್ದಾನೆ. ಆಕೆಗೆ ನಾನು ನಿನ್ನೆನೇ ಕೆಲಸಕ್ಕೆ ಹೋಗಲು ಬೆಳಗ್ಗೆ ಟೆಂಪೋ ಉಂಟು, ಪಿಕ್ ಆಂಡ್ ಡ್ರಾಪ್ ಟೆಂಪೋದಲ್ಲಿ ಹೋಗುವಂತೆ ತಿಳಿಸಿದ್ದೇನೆ. ಆದರೆ ಆಕೆ 8.10ರ ಸುಮಾರಿಗೆ ಕಾಲ್ ಮಾಡಿ ಅಣ್ಣಾ ನಾನು ರೆಡಿ ಇದ್ದೇನೆ ಯಾವುದರಲ್ಲಿ ಹೋಗಬೇಕು ಅಂತ ಕೇಳಿದಳು.ನಾನು ಟೆಂಪೋ ರೆಡಿ ಉಂಟು ಅಂದೆ, ಆಗ ಕಲರ್ ಯಾವುದು ಅಂತ ಕೇಳಿದ್ಳು. ಮನೆಯ ಹತ್ತಿರ ಮೇಲೆ ಟೆಂಪೋ ನಿಂತಿದೆ ಅದರಲ್ಲಿ ಹೋಗು ಅಂತ ಹೇಳಿದ್ದೇ. ಆದರೆ ನಾನು ಒಂದೆರಡು ಸಪ್ಲೈ ಕೆಲಸ ಮುಗಿಸಿಕೊಂಡು ಬಂದಾಗ ಇವಳು ಅಲ್ಲೇ ಇದ್ದಳು. ಆಗ 8.30 ಕಳೆದಿತ್ತು. ಯಾಕೆ ಹೋಗಲಿಲ್ಲವಾ ಅಂತ ಕೇಳಿದ್ದೆ,ಅವಳು ಇಲ್ಲ ಟೆಂಪೋ ಮಿಸ್ ಆಯ್ತು ಅಂತ ಹೇಳಿದಳು. ಆಗ ಬಾ ನಾನು ಬಿಡ್ತೇನೆ ಅಂತ ಕರೆದುಕೊಂಡು ಹೋದೆ. ಗಣೇಶ್ ಕಲ್ಯಾಣ ಮಂಟಪದ ಬಳಿ ಹೋಗುವಾಗ ಬೊಬ್ಬೆ ಹಾಕಿ ನನ್ನನ್ನು ಇಳಿಸಿ ಅಂತ ಹೇಳಿದಳು. ನನಗೆ ಶಾಕ್ ಆಯ್ತು. ಇವಳಿಗೆ ಏನಾಗಿದೆ ಅಂತ. ಇವಳು ಕಾರಿನ ಹಿಂಬಡಿ ಸೀಟಿನಲ್ಲಿ ಕುಳಿತಿದ್ದಳು. ನಾನು ಕಾರಿನಿಂದ ಇಳಿಸಿದೆ. ಆ ನಂತರ ಗಂಡನ ಕರೆ ಆರಂಭವಾಯ್ತು, ಚಾರ್ಮಾಡಿ ಘಾಟಿಗೆ ಕರೆದುಕೊಂಡು ಹೋಗಿದ್ದೇನೆ ಅಂತ ಕರೆ ಬಂತು. ಎಂತೆಂದ್ದೊ ಕರೆ ಬಂತು. ಆಗ ಗಂಡನ ಕರೆ ಬಂತು.ಅವನಿಗೆ ಘಟನೆಯ ಬಗ್ಗೆ ತಿಳಿಸಿದೆ.ಆದರೆ ನಾನು ಸೂಪರ್ ಮಾರ್ಕೆಟ್ ಗೆ ಮುಟ್ಟಿದ ಕೆಲಸ ನಿಮಿಷಗಳಲ್ಲಿ ಆಕೆ ಕಕ್ಕಿಂಜೆ,ಸೋಮಂತಡ್ಕಕ್ಕೆ ಹೋಗಿಯಾಗಿದೆ. ನಿನ್ನೆ ಸಂಜೆ ಬಂದು ದುಡ್ಡು ಬೇಕು ಅಂತ ಕೇಳಿದ್ಳು.ನಾನು ಕೆಲಸ ಆರಂಭಿಸಿ ಆಮೇಲೆ ಕೊಡೋಣ ಅಂತ ಹೇಳಿದ್ದೆ. ದುಡ್ಡಿಗೆ ಡಿಮ್ಯಾಂಡೋ ಎಂತ ಅಂತ ಗೊತ್ತಿಲ್ಲ, ನಾನು ಟೆಕ್ಸ್ಟ್ ಮಾಡ್ಲಿಕ್ಕೆ ಹೋಗಿಲ್ಲ. ಇದೊಂದು ವ್ಯವಸ್ಥಿತ ಸಂಚು. ನಾವು ಕಷ್ಟಪಟ್ಟು ಈ ಲೆವೆಲಿಗೆ ಬಂದಿದ್ದೇವೆ. ಇದರಲ್ಲಿ ಯಾರದ್ದೋ ಕೈವಾಡ ಉಂಟು.ಕೇಸ್ ಕೊಟ್ಟಿರುವ ಬಗ್ಗೆಯೂ ಗೊತ್ತಾಗಿದೆ. ಎಂದು ಸುದ್ದಿಯೊಂದಿಗೆ ಮಾತನಾಡಿದ ವೇಳೆ ಪ್ರಭಾಕರ್ ತಿಳಿಸಿದ್ದಾರೆ.
ಈಗಾಗಲೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ವಿವರ ತನಿಖೆಯ ನಂತರವೇ ತಿಳಿದುಬರಬೇಕಿದೆ.