ಬೆಳ್ತಂಗಡಿ: ಮೇ.10ರಂದು ನಡೆದ ಕರ್ನಾಟಕದ 15ನೇ ವಿಧಾನಸಭಾ ಚುನಾವಣೆಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಶೇ.81.49 ಮತದಾನವಾಗಿದೆ.ಬಹಳಷ್ಟು ಜಿದ್ದಾಜಿದ್ದಿ ಮತ್ತು ಕುತೂಹಲ ಕೆರಳಿಸಿದ ಚುನಾವಣೆ ಮೇ.10ರಂದು ನಡೆಯಿತು.
ಒಟ್ಟು 2,28,871 ಮತದಾರರಿದ್ದು, ಅದರಲ್ಲಿ 1,86,506 ಮಂದಿ ಮತ ಚಲಾವಣೆ ಮಾಡಿದ್ದಾರೆ.ಪುರುಷರು 92,751, ಮಹಿಳೆಯರು 93,755 ಮಂದಿ ಮತದಾನ ಮಾಡಿ ತಾಲೂಕಿನಲ್ಲಿ ಒಟ್ಟು 1,86,506 ಮತದಾನ ನಡೆದಿದೆ.
ತಾಲೂಕಿನಲ್ಲಿ ಬೂತ್ ಸಂಖ್ಯೆ 86 ನೆರಿಯ ಗ್ರಾಮದ ಬಾಂಜಾರಿನ ಸಮುದಾಯ ಭವನದಲ್ಲಿ 108 ಮಂದಿ ಮತದಾರರಿದ್ದು, ಅದರಲ್ಲಿ 104 ಮಂದಿ ಮತ ಚಲಾಯಿಸಿ, ಒಟ್ಟು 96.30% ಮತ ಚಲಾವಣೆ ನಡೆದಿದೆ.
ಬೂತ್ ಸಂಖ್ಯೆ 91 ಶ್ರೀ.ಧ.ಮಂ.ಶಿಕ್ಷಕ ಶಿಕ್ಷಣ ಸಂಸ್ಥೆ ಉಜಿರೆ (ದಕ್ಷಿಣ ವಿಭಾಗ)ಯಲ್ಲಿ 606 ಮತದಾರರಿದ್ದು, 389 ಮಂದಿ ಮತ ಚಲಾಯಿಸಿ, ಒಟ್ಟು 64.19% ಮತ ಚಲಾವಣೆ ಆಗಿದೆ.