ಬೆಳ್ತಂಗಡಿ: ಅಂತಿಮ ಎಮ್. ಎಸ್.ಸಿ (ಮನಶಾಸ್ತ್ರ) ಪರೀಕ್ಷೆಯಲ್ಲಿ ಕು. ಭಾರ್ಗವಿ ಆರ್. ಶೇಟ್ ಬೆಂಗಳೂರು ಯುನಿವರ್ಸಿಟಿಗೆ 3ನೇ ರ್‍ಯಾಂಕ್ ಪಡೆದಿರುತ್ತಾಳೆ. ಈ ಹಿಂದೆ 2016-17ರಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಖಾಸಗಿ ಕಾಲೇಜುಗಳ ಒಕ್ಕೂಟದ ದ.ಕ. ಜಿಲ್ಲಾ ಟಾಪರ್ ಆಗಿದ್ದು, ಕರ್ನಾಟಕ ರಾಜ್ಯಕ್ಕೆ 12ನೇ ರ್‍ಯಾಂಕ್ ಪಡೆದಿದ್ದರು. 2020 ರ ಅಂತಿಮ ಪದವಿಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ರ್‍ಯಾಂಕ್ ಪಡೆದಿರುತ್ತಾರೆ.
ಕೌನ್ಸೆಲಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿ ಸದ್ಯ ಎನ್‌ಇಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಬಿಎಎಮ್ ಸ್ಟೂಡಿಯೋದ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.(ಬೆಲ್ಲಿ ಆರ್ಟ್ಸ್ ಮೀಡಿಯಾ) ಇವರು ಹಾಡು, ನೃತ್ಯ, ಚಿತ್ರಕಲೆ, ಕವನರಚನೆ,ನಾಟಕ, ಚಲನಚಿತ್ರ ನಟನೆಯಲ್ಲಿ ಆಸಕ್ತಿ ಹೊಂದಿದ್ದು ಬಹುಮುಖ ಪ್ರತಿಭೆಯಾಗಿರುತ್ತಾರೆ.
ಇವರು ಉಜಿರೆಯ ನಿನ್ನಿಕಲ್ಲು ನಿವಾಸಿ, ಕೃಷಿಕ ಕೆ. ರಾಘವೇಂದ್ರ ಶೇಟ್, ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ, ಬೆಳ್ತಂಗಡಿಯ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸೀತಾ ಆರ್, ಶೇಟ್‌ರವರ ಪುತ್ರಿಯಾಗಿರುತ್ತಾರೆ.