ಚಾರ್ಮಾಡಿ: ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಬೆಳಿಗ್ಗೆ 7ಗಂಟೆಯಿಂದ ಎಲ್ಲಾ ಬೂತುಗಳಲ್ಲಿ ಮತದಾನ ಆರಂಭವಾಗಿದ್ದು, ಚಾರ್ಮಾಡಿ ಬೂತ್ ಸಂಖ್ಯೆ 21ರಲ್ಲಿ ಏಳೆಂಟು ಜನ ಮತ ಹಾಕಿದ ನಂತರ ಮತ ಯಂತ್ರ ಕೈ ಕೊಟ್ಟಿದ್ದು ಒಂದು ಗಂಟೆಗಳ ಕಾಲ ಕೆಟ್ಟ ಮೆಷಿನ್ ಸರಿಯಾಗದೆ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಹಲವು ಮತದಾರರು ವಾಪಾಸ್ಸಾಗಿದ್ದರು.
ಇದೀಗ ಮತ ಯಂತ್ರ ಸರಿಪಡಿಸಿ ಮತ್ತೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ.