Site icon Suddi Belthangady

ಗಂಡಿಬಾಗಿಲಿನಲ್ಲಿ ಕೆ.ಎಸ್ .ಎಂ.ಸಿ.ಎ ಯಿಂದ ಮತ್ತೊಂದು ಮನೆ ಹಸ್ತಾಂತರ

ನೆರಿಯ: ಗಂಡಿಬಾಗಿಲಿನ ನೆರಿಯ ಕ್ಕಾಡ್ ಪರಿಸರದಲ್ಲಿ ಕಳೆದವರ್ಷದ ಅತಿವೃಷ್ಟಿ ಯಲ್ಲಿ ಹಾನಿಗೀಡಾದ ಮನೆಯನ್ನು ಗಂಡಿಬಾಗಿಲಿನ ಕರ್ನಾಟಕ ಸೀರೋ ಮಲಬಾರ್ಕ್ಯಾಥೋಲಿಕ್ ಅಸೋಸಿಯೇಷನ್ ಕೆ ಎಸ್ ಎಂ ಸಿ ಎ ನೇತೃ ತ್ವದಲ್ಲಿ ಮರು ನಿರ್ಮಿಸಿ ಮನೆಯವರಿಗೆ ಹಸ್ಥಾoತರಿಸಲಾಯಿತು.ಮನೆಯ ಆಶೀರ್ವಾದ ವನ್ನು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾ ಧ್ಯಕ್ಷರಾದ ಪರಮ ಪೂಜ್ಯ ಅತಿವಂದನಿಯ ಲಾರೆನ್ಸ್ ಮುಕ್ಕುಯಿ ನಿರ್ವಹಿಸಿದರು. ನಲವತ್ತ ಐದು ದಿನಗಳಲ್ಲಿ ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆ ನಿರ್ಮಿಸಿರುವುದು ಕೆ ಎಸ್ ಎಂ ಸಿ ಎ ಕಾರ್ಯಕರ್ತರ ಕಾರ್ಯ ವೈಖರಿಗೆ ಹಿಡಿದ ಕೈ ಗನ್ನಡಿ ಎಂದು ಧರ್ಮಾ ಧ್ಯಕ್ಷರು ಶ್ಲಾಘಿಸಿದರು.

ಸಹಕರಿಸಿದ ಎಲ್ಲರನ್ನು ವಂದನಿಯ ಫಾ /ಶಾಜಿ ಮಾತ್ಯು ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು ಆರ್ಥಿಕ ಸಹಾಯವನ್ನು ಶ್ರೀ ಯುತ ಶ್ರೀ ಮನೋಜ್ ಮಾದವತ್, ಗಂಡಿಬಾಗಿಲು, ಸೇಬಾಸ್ಟಿನ್ ಚಾಕೋ ಕತ್ತಾರ್, ಶೋಭಾ ಜೋಬ್ ಯು ಎಸ್ ಎ, ಕಿರಣ್ ಮಾಳ ಚೌಕಿ,ಡಾ /ಅಂಟೋನಿ ತೋತ್ತಪ್ಪಳ್ಳಿ ನಾವೂರು. ವಿನೋದ್ ನೀಲಿಯರ, ವಿನ್ ಸೆಂಟ್ ಡಿ ಪೌಲ್ ಗಂಡಿ ಬಾಗಿಲು, ಶಿಜು ಸಿ ವಿ, ಸಿ ಎಂ ಎಲ್ ಗಂಡಿಬಾಗಿಲು ಕೆ ಎಸ್ ಎಂ ಸಿ ಎ ಮಹಿಳಾ ಘಟಕ ಗಂಡಿಬಾಗಿಲು, ಬಿಜು, ಸಾಜು ದೇವಗಿರಿ ಜಸ್ಥಿನ್, ಆದರ್ಶ್,ಸೆಂಟ್, ಬೇಬಿ, ಸುಜನ್ ತಂಗಚನ್, ಸುಜನ್, ಜೋಯ್ ಕೆ ವಿ ತೋಮಸ್ ವಿ ಡಿ, ಟೊಮಿ ನೀಲಿಯರ, ರೆಜಿ ತೋಟ್ಟಥಾಡಿ, ಅರುಣ್ ಸೋಮನ್, ಬಿಜು ಮಾಧವತ್,ಫ್ರಾನ್ಸಿಸ್ ಪಿ ಪಿ ,ನಿತಿನ್ ಮಾದವತ್, ಜೇಮ್ಸ್ ರೂಡ್ಸೆಟ್ ಪ್ರಜ್ವಲ್, ಬೇಬಿ ವಿ ಟಿ ಹಾಗೂ ಇತರರು ಸಹಾಯ ವನ್ನು ನೀಡಿದರು.

ಟ್ರಸ್ಟಿ ಗಳಾದ ಶ್ರೀ ಸೇಬಾಸ್ಟಿನ್ ಎಂ ಜೆ, ಮಾತ್ಯು ಪಿ ಎಂ, ಬೇಬಿ ಸಿ ಎ, ಶ್ರೀಯುತ ಶಿಜು ಸಿ ವಿ ಕಾರ್ಯಕ್ರಮ ನಿರೂಪಿಸಿದರು.

Exit mobile version