Site icon Suddi Belthangady

ಬೆಳಿಗ್ಗೆ ಬಿಜೆಪಿ ಗೆ ಬಲವಂತವಾಗಿ ಸೇರ್ಪಡೆಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಸಂಜೆ ಮರಳಿ ಕಾಂಗ್ರೆಸ್ ಗೆ ಸೇರ್ಪಡೆ

ಬೆಳ್ತಂಗಡಿ : ಗುರು ಉಳ್ಳಾಲ್ತಿ ದೈವಸ್ಥಾನದ ಟ್ರಸ್ಟ್ ಗೆ ದುಡ್ಡು ಕೊಡುವುದಾಗಿ ಬಿ ಜೆ ಪಿ ಚುನಾವಣಾ ಕಚೇರಿಗೆ ಬರ ಹೇಳಿ ಶಾಸಕ ಹರೀಶ್ ಪೂಂಜಾರವರು ಕಾಂಗ್ರೇಸ್ ಕಾರ್ಯಕರ್ತರಿಗೆ ಬಿ ಜೆ ಪಿ ಪಕ್ಷದ ಶಾಲು ಹಾಕಿ ಬಲವಂತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದು ಇದರಿಂದ ಮುಜುಗುರಕ್ಕೊಳಗಾದ ಕಾಂಗ್ರೇಸ್ ಕಾರ್ಯಕರ್ತರು ಸಂಜೆ ಪುನಃ ಮರಳಿ ಪಕ್ಷಕ್ಕೆ ಸೇರ್ಪಡೆಯಾದ ಸ್ವಾರಸ್ಯಕರ ಬೆಳವಣಿಗೆ ನಿಡ್ಲೆಯಲ್ಲಿ ನಡೆದಿದೆ.

ಕಾಂಗ್ರೇಸ್ ಕಾರ್ಯಕರ್ತರಾದ ನಿಡ್ಲೆ ಗ್ರಾಮದ ಶೇಡಿ ನಿವಾಸಿಗಳಾದ ರವಿಪ್ರಸಾದ್, ವಿನೋದ್, ರಮೇಶ್, ಪ್ರಶಾಂತ್, ನವೀನ ಮತ್ತು ಶಿವಪ್ಪ ರವರುಗಳು ಇಂದು ಸಂಜೆ ನಿಡ್ಲೆಯಲ್ಲಿ ಪುನಃ ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಯಾದ ಪ್ರಮುಖರು.

ಈ ಸಂದರ್ಭದಲ್ಲಿ ನಿಡ್ಲೆ ಕಾಂಗ್ರೇಸ್ ಗ್ರಾಮ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಮುಖಂಡರಾದ ಸೇಬಾಷ್ಠಿಯನ್, ಗಣೇಶ್ ನಿಡ್ಲೆ, ಗೋಪಾಲಕೃಷ್ಣ, ಶ್ರೀಧರ ಮತ್ತು ಗಿರೀಶ್ ಗೌಡ ಉಪಸ್ಥಿತರಿದ್ದರು.

Exit mobile version