Site icon Suddi Belthangady

ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಶರ್ಮ ಬಿಶ್ವ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ರೋಡ್ ಶೋ

ಉಜಿರೆ: ಉಜಿರೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ್ ಶರ್ಮ ಬಿಶ್ವ ರೋಡ್ ಶೋ ಮೂಲಕ ಮತ ಯಾಚನೆಗೆ ಚಾಲನೆ ನೀಡಿ ಮಾತನಾಡಿ ದೇಶಕ್ಕೆ ಮೋದಿಜಿ, ಕರ್ನಾಟಕಕ್ಕೆ ಬಿಜೆಪಿ ಸರಕಾರ, ಬೆಳ್ತಂಗಡಿಗೆ ಯುವ ನಾಯಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ರನ್ನು ಬಹುಮತ ದಿಂದ ಆಯ್ಕೆ ಮಾಡಬೇಕಾಗಿ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ವಿಧಾನ ಸಭಾ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಕುಶಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.

Exit mobile version