Site icon Suddi Belthangady

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯ ಆರು ವಿದ್ಯಾರ್ಥಿಗಳು ಪೆಂಟಗಾನ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಆಯ್ಕೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಎಸ್ ಡಿ ಎಂ ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಮಾನವ ಸಂಪನ್ಮೂಲ ಕೇಂದ್ರವು ಆಯೋಜಿಸಿದ್ದ ನೇರ ಸಂದರ್ಶನ ಮತ್ತು ನೇಮಕಾತಿ ಪ್ರಕ್ರಿಯೆ ಕಾರ್ಯಕ್ರಮವು ಮೇ.3ರಂದು ನಡೆಯಿತು. ಪೆಂಟಗಾನ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವರಿಷ್ಠರಾದ ರಚನಾ ಜೆ ಶೆಟ್ಟಿ ಮತ್ತು ಕಾಜಲ್ ರವರು ನೇರ ಸಂದರ್ಶನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಈ ಸಂದರ್ಶನಕ್ಕೆ 206 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳಾದ ನೇಮಕಾತಿ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾದ 06 ವಿದ್ಯಾರ್ಥಿಗಳು ಪೆಂಟಗಾನ್ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಆಯ್ಕೆ ಆಗಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ಡಾ. B.A ಕುಮಾರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ. ನಾಗರಾಜ ಪೂಜಾರಿ ಮತ್ತು ಹರೀಶ ಶೆಟ್ಟಿ ಯವರ ತಂಡವು ಯಶಸ್ವಿಯಾಗಿ ನೇಮಕಾತಿ ಪ್ರಕ್ರಿಯೆಯನ್ನು ಸಂಘಟಿಸಿ ನಿರ್ವಹಣೆ ಮಾಡಿದರು.

Exit mobile version