Site icon Suddi Belthangady

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಬೇಸಿಗೆ ಶಿಬಿರ ಯಶಸ್ವಿ ಸಂಪನ್ನ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿಯ ಚಿಣ್ಣರ ಬೇಸಿಗೆ ಶಿಬಿರ ರಂಗ ಜೇಂಕಾರ ದಿನಾಂಕ ಮೇ.02ರಂದು ಸಂಪನ್ನಗೊಂಡಿತು.

ಸಮಾರೋಪ ವೇದಿಕೆಯ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಅಧ್ಯಕ್ಷರಾದ ಶಂಕರ್ ರಾವ್ ವಹಿಸಿ ಬೆಳೆಯುವ ಮಕ್ಕಳ ಭೌತಿಕ ಮತ್ತು ಮಾನಸಿಕ ವಿಕಾಸಕ್ಕೆ ಬೇಸಿಗೆ ಶಿಬಿರಗಳು ಅತ್ಯಂತ ಪೂರಕವಾಗಿದೆ. ಬೇಸಿಗೆ ಶಿಬಿರದಲ್ಲಿ ಕೊಲಾಜ್, ಕ್ರಾಫ್ಟ್, ಕ್ಲೇ ಮಾಡೆಲ್, ಗ್ರಿಟಿಂಗ್ ಕಾರ್ಡ್ ತಯಾರಿಕೆ ಹೊರಂಗಣ ಕ್ರೀಡೆ ಮುಂತಾದ ಚಟುವಟಿಕೆಗಳು ಮಕ್ಕಳಲ್ಲಿ ಸೃಜನಶೀಲತೆ ಉಂಟುಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.ಜೆಸಿಐ ಭಾರತದ ವಲಯ XVರ ವಲಯಧ್ಯಕ್ಷ ಪುರುಷೋತ್ತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೆಸಿಐ ಬೆಳ್ತಂಗಡಿ ಆಯೋಜಿಸಿದ ಬೇಸಿಗೆ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮಕ್ಕಳ ಕೌಶಲ್ಯ ಭರಿತ ಚಟುವಟಿಕೆಗಳನ್ನು ಕಂಡು ಶ್ಲಾಘಿಸಿದರು. ಕಾರ್ಯಕ್ರಮ ಸಂಯೋಜಕರಾದ ಹೇಮಾವತಿ ಕೆ. ಶಿಬಿರಾರ್ಥಿಗಳ ಬಹುಮಾನ ಪಟ್ಟಿಯನ್ನು ವಾಚಿಸಿದರು.
ಬೇಸಿಗೆ ಶಿಬಿರದುದ್ದಕ್ಕೂ ದುಡಿದ ಜೆಸಿ ವಿನಾಯಕ ಪ್ರಸಾದ್ ಜೆ ಜೆ ಸಿ ಧನುಷ್ ಇವರನ್ನು ಗೌರವಿಸಲಾಯಿತು.ಜೆಸಿಐ ಬೆಳ್ತಂಗಡಿಯ ಪೂರ್ವಧ್ಯಕ್ಷರು ಸದಸ್ಯರು ಮತ್ತು ಶಿಬಿರಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.


ಗೌರವಾನ್ವಿತ ಅಬ್ಯಾಗತರನ್ನು ಮತ್ತು ಪದಾಧಿಕಾರಿಗಳನ್ನು ಪೂರ್ವಧ್ಯಕ್ಷರಾದ ಚಿದಾನಂದ ಇಡ್ಯಾ ವೇದಿಕೆಗೆ ಬರಮಾಡಿಕೊಂಡರು.
ಕಾರ್ಯದರ್ಶಿ ಸುಧೀರ್ ಕೆ.ಎನ್ ಸರ್ವರಿಗೂ ಧನ್ಯವಾದ ತಿಳಿಸಿದರು.

Exit mobile version