ಬೆಳ್ತಂಗಡಿ: ಇತ್ತೀಚೆಗೆ ನಾಲ್ಕೂರುನಲ್ಲಿ ನಡೆದ ಬಿಜೆಪಿ ಸಭೆಗೆ ಮಹಿಳೆಯರನ್ನು ಬಲಾತ್ಕಾರವಾಗಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿಸಿ ಕೊಂಡಿದ್ದಾರೆ. ಇದರಿಂದ ಮನಸಿಗೆ ಅಘಾತವಾಗಿ ಮಹಿಳೆಯ ತಂದೆ ಹೃದಯಾಘಾತಾದಿಂದ ನಿಧನರಾಗಿದ್ದಾರೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಆರೋಪಿಸಿದರು. ಅವರು ಮೇ.2 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ನಾಲ್ಕೂರಿನಲ್ಲಿ ಬಿಜೆಪಿ ಸೋಲಿನ ಭಯದಿಂದ ಮದುವೆಯ ಆಮಂತ್ರಣ ನೀಡಲು ಮಹಿಳೆ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಬಲಾತ್ಕಾರವಾಗಿ ಕೈಹಿಡಿದು ಕೊಂಡು ಹೋಗಿ ಪಕ್ಷಕ್ಕೆ ಸೇರಿಸಿ ಶಾಲು ಹಾಕಿದ್ದಾರೆ. ಈ ವಿಷಯ ತಿಳಿದು ಆ ಮಹಿಳೆಯ ತಂದೆ ಅಘಾತವಾಗಿ ಹೃದಯಾಗತದಿಂದ ಸಾವನಪ್ಪಿದ್ದರೆ ಈ ಜೀವ ಹಾನಿಗೆ ಶಾಸಕ ಪೂಂಜರೇ ಕಾರಣ. ಬೆಳ್ತಂಗಡಿಯ ಗುತ್ತಿಗೆದಾರ ನಾಗೇಶ್ ಕುಮಾರ್ ಕಾಮಗಾರಿ ಗುತ್ತಿಗೆಗೆ ಸಂಬಂದಿಸಿದಂತೆ ಟೆಂಡರ್ ಮೊತ್ತದ ಶೇ.5 ಹಣವನ್ನು ಮುಂಚಿತವಾಗಿ ನೀಡದೆ ಇದ್ದಲ್ಲಿ ಟೆಂಡರ್ ನಲ್ಲಿ ಭಾಗವಹಿಸದಂತೆ ಶಾಸಕರು ಧುಮ್ಕಿ ಹಾಕಿ ಟೆಂಡರ್ ಹಿಂಪಡೆಯು ವಂತೆ ಬೆದರಿಕೆ ಹಾಕಿದ್ದ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ತಾಲೂಕಿನ ಆಂಬುಲೆನ್ಸ್ ಚಾಲಕರಿಗೆ ಮತ್ತು ಶಾಸಕರಿಗೆ ಹೊಂದಾಣಿಕೆ ಇದ್ದ ಹಾಗೆ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸ್ಥಳದಲ್ಲಿ ಆಂಬುಲೆನ್ಸ್ ಗೆ ಧ್ವನಿ ವರ್ಧಕ ಕಟ್ಟಿ ನಿಲ್ಲಿಸುತ್ತಾರೆ. ನಾಮಪತ್ರ ಸಲ್ಲಿಸುವ ದಿನ ಹಲವು ಬಾರಿ ಆಂಬುಲೆನ್ಸ್ ಸಾಗುತ್ತಿತ್ತು. ಮುಗೇರಡ್ಕ ಕುಡಿಯುವ ನೀರಿನ ಯೋಜನೆಯಿಂದ ಯಾವ ಪ್ರಯೋಜನ ಇಲ್ಲದೆ ಸರಕಾರದ ಹಣ ಪೋಲಾಗುತ್ತಿದೆ. ಕಾಮಗಾರಿಗಳಲ್ಲಿ 40 ಶೇ. ಕಮಿಷನ್ ಅಲ್ಲದೆ ರೂ.1 ಕೋಟಿ ಕಾಮಗಾರಿಗೆ ರೂ.2 ಕೋಟಿ ಬಜೆಟ್ ತಯಾರಿ ಮಾಡುತ್ತಾರೆ ಎಂದು ಆರೋಪಿಸಿದರು.ಪ್ರತಾಪಸಿಂಹ ನಾಯಕ್ ರವರು ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ದೇವಸ್ಥಾನಕ್ಕೆ ಯಾವುದೇ ಅನುಧಾನ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಕ್ಕಿನಿಂದ ವಿವರ ಪಡೆದುಕೊಳ್ಳಲಿ ನನ್ನ ಅವಧಿಯಲ್ಲಿ ಹಲವು ದೇವಸ್ಥಾನಕ್ಕೆ ಅನುದಾನ ದೊರಕಿಸಿ ಕೊಟ್ಟಿದ್ದೇನೆ ವೇಣೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೂಪಾಯಿ 95 ಲಕ್ಷ ಅನುದಾನ ನೀಡಿದ್ದೇನೆ ಪೂಂಜ ಕೇವಲ ರೂ.5 ಲಕ್ಷ ಮಾತ್ರ ನೀಡಿದ್ದು. ಅಲ್ಲದೆ ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ 70 ಕಿ. ಮೀ. ವರೆಗೆ ವಿದ್ಯುತ್ ದೀಪ ಅಲಂಕಾರಕ್ಕೆ ಕಂಬದಿಂದ ವಿದ್ಯುತ್ ಕದ್ದು ತೆಗೆದಿದ್ದಾರೆ ಎಂದು ಆರೋಪಿಸಿದರು.ಕೊರೋನಾ ಸಮಯದಲ್ಲಿ ಬಲಾತ್ಕಾರವಾಗಿ ಚುಚ್ಚು ಮದ್ದು ನೀಡಿ ಹೃದಯಾಘಾತವಾಗಿ ಸಾವಿಗೆ ಕಾರಣವಾಗಿದೆ. ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಮಲವಂತಿಗೆಯಲ್ಲಿ ಕಿಂಡಿ ಆಣೆಕಟ್ಟ ರೈತರಿಗೆ ಪ್ರಯೋಜನ ಇಲ್ಲದ ಜಾಗದಲ್ಲಿ ನಿರ್ಮಾಣವಾಗಿದೆ. ಪರಾರಿ ಗುಡ್ಡೆ ಎಂಬಲ್ಲಿ ಖಾಸಗಿಯವರ ಜಾಗದಲ್ಲಿ ರೂ.35 ಲಕ್ಷ ವೆಚ್ಚದಲ್ಲಿ ಮತ್ತು ಕಜಕ್ಕೆಯಲ್ಲಿ ರೂ.38 ಲಕ್ಷದ ಬೋರ್ ವೆಲ್ ಪ್ರಯೋಜನ ಇಲ್ಲದ0ದಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬೆಳ್ತಂಗಡಿ ಚುನಾವಣಾ ಉಸ್ತುವಾರಿ ಕೇರಳ ಶಾಸಕಸಜೀವ್ ಜೋಸೆಫ್,ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಅಭಿನಂದಂನ್ ಹರೀಶ್ ಕುಮಾರ್, ಪಕ್ಷದ ಪ್ರಮುಖರಾದ ರಾಜಶೇಖರ ಶೆಟ್ಟಿ, ಭರತ್ ಕುಮಾರ್ ಇಂದಬೆಟ್ಟು, ನೇಮಿರಾಜ ಕಿಲ್ಲೂರು, ವಿನಸೆಂಟ್ ಡಿಸೋಜ, ಎನ್. ಲಕ್ಷ್ಮಣ ಗೌಡ ಇಂದಬೆಟ್ಟು, ಪಕ್ಷದ ವಕ್ತರ ಮನೋಹರ ಇಳಂತಿಲ ಉಪಸ್ಥಿತರಿದ್ದರು.