Site icon Suddi Belthangady

ವೇಣೂರು: ಉಂಬೆಟ್ಟು ಶಾಲಾ ವಿದ್ಯಾರ್ಥಿನಿ ಸುಪ್ರಿಯಾ.ಎಸ್ ರಾಜ್ಯ ಮಟ್ಟದ ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

ವೇಣೂರು: 2022-23ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಜ್ಯ ಮಟ್ಟದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಪರೀಕ್ಷೆ ಬರೆದ 1091 ಮಂದಿ 8 ನೇ ತರಗತಿಯ ವಿದ್ಯಾರ್ಥಿಗಳಲ್ಲಿ 30 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಆ ಪೈಕಿ ಸ.ಉ.ಪ್ರಾ.ಶಾಲೆ ಉಂಬೆಟ್ಟು ಇಲ್ಲಿನ ಸುಪ್ರಿಯಾ.ಎಸ್ ವಿದ್ಯಾರ್ಥಿಯು ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾಳೆ .

ಮೂಡುಕೋಡಿ ಗ್ರಾಮದ ನಡ್ತಿಕಲ್ಲು, ಹುಲ್ಲೋಡಿ ನಿವಾಸಿ ಆದ ಶ್ರೀ ಸದಾನಂದ ಪೂಜಾರಿ ಹಾಗೂ ಶ್ರೀಮತಿ ವನಿತಾ ಇವರ ಸುಪುತ್ರಿ ಕುಮಾರಿ ಸುಪ್ರಿಯಾ ಎಸ್ ಎನ್.ಎಮ್.ಎಮ್.ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಪೋಷಕರು, ಶಿಕ್ಷಕರು, ಶಾಲೆ ಮಾತ್ರವಲ್ಲ ತಾಲೂಕಿಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಇವರಿಗೆ ತಿಂಗಳಿಗೆ 1000 ರೂ* ನಂತೆ ವರ್ಷಕ್ಕೆ 12,000 ರೂ ಮುಂದಿನ ನಾಲ್ಕು ವರ್ಷಗಳ ವರೆಗೆ ಒಟ್ಟು 48000 ರೂ ವಿದ್ಯಾರ್ಥಿ ವೇತನ ದೊರೆಯಲಿದೆ. ಇವರಿಗೆ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕರು ತರಬೇತಿ ನೀಡಿರುತ್ತಾರೆ.ಜೊತೆಗೆ ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆಯಲ್ಲಿಯೂ ತರಬೇತಿ ಪಡೆದಿದ್ದಾರೆ.

Exit mobile version