Site icon Suddi Belthangady

ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರ ಮನೆ-ಮನೆ ಭೇಟಿ ಮತ ಪ್ರಚಾರ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಪರವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಎ.30 ರಂದು ತಾಲೂಕಿನ ಎಲ್ಲಾ 241 ಬೂತ್ ಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮನೆ ಮನೆ ಪ್ರಚಾರ ಅಭಿಯಾನ ನಡೆಸಿದರು.

ರಾಜ್ಯ ಬಿಜೆಪಿ ಸೂಚನೆಯಂತೆ ಭಾನುವಾರ ಎಲ್ಲ ಮುಖಂಡರು ಅವರ ಬೂತ್ ಗಳಲ್ಲೇ ಪ್ರಚಾರ ನಡೆಸಬೇಕು ಎಂಬ ಸೂಚನೆಯಂತೆ ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರ ಗರ್ಡಾಡಿ ಗ್ರಾಮದ ಬೂತ್ ಸಂಖ್ಯೆ 124 ರಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮರೋಡಿ ಗ್ರಾಮದಲ್ಲಿ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಗ್ರಾಮದ ಬೂತ್, ಪ್ರಧಾನ ಕಾರ್ಯದರ್ಶಿ ಗಳಾದ ಶ್ರೀನಿವಾಸ ರಾವ್ ಧರ್ಮಸ್ಥಳ ಗ್ರಾಮದ ಬೂತ್, ಗಣೇಶ್ ಗೌಡ ನಾವೂರು ಗ್ರಾಮದ ಬೂತ್ ನಲ್ಲಿ ಮನೆ ಮನೆ ಪ್ರಚಾರ ನಡೆಸಿದರು

Exit mobile version