Site icon Suddi Belthangady

ಸುದ್ದಿ ಬಿಡುಗಡೆ ಪತ್ರಿಕೆ ವಿತರಕ, ಉದ್ಯಮಿ ಅರುಣ್ ಕುಮಾರ್ ನಿಧನ

ಸವಣಾಲು: ಸವಣಾಲು ಗ್ರಾಮದ ಕುಕ್ಕುಜೆ ಮನೆಯ ಅರುಣ್ ಕುಮಾರ್ (45ವ) ಅವರು ಅನಾರೋಗ್ಯದಿಂದ ಇಂದು ಎ.30ರಂದು ನಿಧನರಾಗಿದ್ದಾರೆ.

ಮೃತರು ಸವಣಾಲಿನಲ್ಲಿ ಹಲವು ವರ್ಷಗಳಿಂದ ಸುದ್ಧಿ ಬಿಡುಗಡೆ ವಾರ ಪತ್ರಿಕೆ ವಿತರಕರಾಗಿದ್ದರು. ಉದ್ಯಮವನ್ನು ನಡೆಸುತ್ತಿದ್ದು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು. ಸವಣಾಲಿನ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು.ಮೃತರು ಪತ್ನಿ, ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version