
ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಕುಕ್ಕಾವು ಹರೀಶ(30), ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಎ.21ರಂದು ನಾರಾಯಣ ಕುಂಬಾರ ಮನೆಯ ಮಹಡಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಹರೀಶ ಅವರ ತಲೆಯ ಮಧ್ಯೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಕೂಡಲೇ ಚಿಕಿತ್ಸೆಗೆ ಎಸ್ ಡಿ ಎಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಎ.28ರಂದು ಮೃತಪಟ್ಟಿದ್ದಾರೆ.
ಹರೀಶ್ ರವರು ಮೇಸ್ತ್ರಿ ಕೆಲಸದಲ್ಲಿ ಪ್ರಾಮಾಣಿಕತೆ ಕಾಪಾಡಿ ಎಲ್ಲರಲ್ಲಿಯೂ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ತಂದೆ ಲಕ್ಷ್ಮಣ ಕುಂಬಾರ, ತಾಯಿ ಕುಸುಮಾವತಿ, ಪತ್ನಿ, ಒಂದೂವರೆ ವರ್ಷದ ಮಗು, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.