Site icon Suddi Belthangady

ಮಳೆಗಾಗಿ ದೇವರ ಮೊರೆ ಹೋದ ಭಕ್ತರು ಮೇ.1ರಂದು ದೇಲಂಪುರಿ ಮಹಾಗಣಪತಿ ಕ್ಷೇತ್ರದಲ್ಲಿ ಸಿಯಾಳಾಭಿಷೇಕ

ವೇಣೂರು, ಎ. ೨೮: ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದಾರೆ.ಕುಡಿಯಲು ಮಾತ್ರವಲ್ಲದೆ ಕೃಷಿ ನೀರಿಗೂ ಹಾಹಾಕಾರ ಉಂಟಾಗಿದೆ.
ಊರಿನಲ್ಲಿ ಶೀಘ್ರ ಸಮೃದ್ಧಿ ಮಳೆಯಾಗಲಿ ಎಂದು ಕರಿಮಣೇಲು ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವರಿಗೆ ಮೇ ೧ ರಂದು ಬೆಳಿಗ್ಗೆ ೭-೩೦ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಿ ಸಿಯಾಳಾಭಿಷೇಕ ನೆರವೇರಿಸಲು ಆಡಳಿತ ಸಮಿತಿ ನಿರ್ಧರಿಸಿದೆ.
ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ಸ್ವಾಮಿಗೆ ಊರಿನ ಎಲ್ಲ ಭಕ್ತಾದಿಗಳಿಂದ ಎಳನೀರು ಅಭಿಷೇಕ ಸೇವೆ ಜರಗಲಿದ್ದು, ಆದುದರಿಂದ ಸಿಯಾಳ ಒಪ್ಪಿಸಲು ಇಚ್ಚಿಸುವ ಭಕ್ತಾಧಿಗಳು ಎ.೩೦ರಂದು ಅಥವಾ ಮೇ ೧ರ ಮುಂಜಾನೆ ಶ್ರೀ ಕ್ಷೇತ್ರಕ್ಕೆ ಒಪ್ಪಿಸಬಹುದಾಗಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

Exit mobile version