Site icon Suddi Belthangady

ಗೇರುಕಟ್ಟೆ: ಅಗಲಿದ ಯಕ್ಷಗಾನ ಹವ್ಯಾಸಿ ಕಲಾವಿದ ನರಸಿಂಹ ಮೂರ್ತಿಯವರಿಗೆ ನುಡಿ ನಮನ ಮತ್ತು ಸಂಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ

ಗೇರುಕಟ್ಟೆ: ಶ್ರೀ ಮದವೂರ ವಿಘ್ನೇಶ ಕಲಾ ಸಂಘ ಗೇರುಕಟ್ಟೆ ಇದರ ನೇತೃತ್ವದಲ್ಲಿ ವಿಷ್ಣುಪದ್ಮ ಮಧೂರು ಮನೆ ಗೇರುಕಟ್ಟೆಯಲ್ಲಿ ಇತ್ತೀಚೆಗೆ ಅಗಲಿದ ಸ್ಥಳೀಯ ಯಕ್ಷಗಾನ ಹವ್ಯಾಸಿ ಹಿಮ್ಮೇಳ ವಾದಕರಾಗಿದ್ದ ದಿವಂಗತ ನರಸಿಂಹ ಮೂರ್ತಿ ಕುಂಟಿನಿ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.

ಖ್ಯಾತ ಸಾಹಿತಿಗಳಾದ ಪ.ರಾಮಕೃಷ್ಣ ಶಾಸ್ತ್ರಿಯವರು ದಿ.ನರಸಿಂಹಮೂರ್ತಿಯವರ ಸರಳ ವ್ಯಕ್ತಿತ್ವ, ಸ್ನೇಹಮಯಿ ಜೀವನ, ನಿಸ್ವಾರ್ಥ ಬದುಕಿನ ಕುರಿತು ಮಾತನಾಡಿ ನುಡಿ ನಮನ ಸಲ್ಲಿಸಿದರು.ಪ್ರೋ.ಮಧೂರು ಮೋಹನ ಕಲ್ಲೂರಾಯರು ಅವರು ತನ್ನ ಮತ್ತು ಅವರ ನಡುವಿನ ಬಾಂಧವ್ಯದ ಬಗ್ಗೆ, ಯಕ್ಷಗಾನ ಕಲಾಸಂಘಗಳಿಗೆ ಅವರು ನೀಡುತ್ತಿದ್ದ ಪ್ರೋತ್ಸಾಹದ ಬಗ್ಗೆ ಗುಣಗಾನ ಮಾಡಿದರು.

ಕೊಯ್ಯೂರು ವಿಜಯಕುಮಾರ್, ವಿಷ್ಣುಪ್ರಸಾದ್ ಕಲ್ಲೂರಾಯ, ಅಮೋಘ ಕುಂಟಿನಿ, ಇನ್ನಿತರರು ಮೂರ್ತಿಯವರನ್ನು ಸ್ಮರಿಸಿದರು.ಸುವರ್ಣ ಕುಮಾರಿ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ, ರಾಮಕೃಷ್ಣ ಭಟ್ ನಿನ್ನಿಕಲ್ಲು ವಂದಿಸಿದರು.ಬಾಸಮೆ ನಾರಾಯಣ ಭಟ್, ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀಮತಿ ಶಾರದಾ ಮತ್ತಿತರರು ಉಪಸ್ಥಿತರಿದ್ದರು.
ದಿ.ನರಸಿಂಹ ಮೂರ್ತಿ ಅವರ ಸಂಸ್ಮರಣಾರ್ಥ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ದಕ್ಷಾಧ್ವರ ಕಥೆಯ ತಾಳಮದ್ದಳೆ ಆಖ್ಯಾನ ನೆರವೇರಿತು.

Exit mobile version