Site icon Suddi Belthangady

ಉಜಿರೆ ಶ್ರೀ ಧ.ಮಂ ಕಾಲೇಜು ವತಿಯಿಂದ ನಿವೃತ್ತ ಕರ್ನಲ್ ನಿತಿನ್ ಭಿಡೆ ಅವರಿಗೆ ಸನ್ಮಾನ

ಉಜಿರೆ: ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸುವ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧವಾಗಬೇಕು.ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯವನ್ನು ವಿದ್ಯಾರ್ಥಿ ಜೀವನದಲ್ಲೇ ಆರಂಭಿಸಬೇಕು. ಎಂದು ಭಾರತೀಯ ಸೇನೆಯ ನಿವೃತ್ತ ಕರ್ನಲ್ ನಿತಿನ್ ಆರ್ ಭಿಡೆ ಅಭಿಪ್ರಾಯಪಟ್ಟರು.

ಶ್ರೀ ಧ. ಮಂ. ಡಿ.ಎಡ್. ಕಾಲೇಜು ಸಭಾಂಗಣದಲ್ಲಿ ಉಜಿರೆ ಎಸ್ ಡಿ ಎಮ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ನಡೆಸಿಕೊಟ್ಟ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ “ಎಸ್ ಡಿ ಎಂ ನೆನಪಿನಂಗಳ” ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಗೌರವ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ದೌರ್ಬಲ್ಯಗಳನ್ನು ತೋರ್ಪಡಿಸದೇ ಎದುರಾಗುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕೆಂದು ಪ್ರೋತ್ಸಹಿಸಿದರು.ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡು ಇಂದಿನ ವಿದ್ಯಾರ್ಥಿಗಳೂ ಕೂಡ ಅಂದಿನ ವಿದ್ಯಾರ್ಥಿಗಳಂತೆ ಸವಾಲುಗಳಿಗೆ ಸೆಟೆದು ನಿಲ್ಲಬೇಕು,ಸವಾಲನ್ನೆದುರಿಸುವ ಕಿಚ್ಚನ್ನು ಮನದಲ್ಲಿ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆ ಅವರು ನಿತಿನ್ ಭಿಡೆಯವರ ಪ್ರತಿಭೆ ಹಾಗೂ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಎನ್ ಸಿ ಸಿ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ಕೆಡೆಟ್ ಗಳನ್ನು ಗೌರವಿಸಲಾಯಿತು ಮತ್ತು ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಯಾದ ಶಾಮ ಪ್ರಸಾದ್‌ಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ 5000 ರೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ದಲ್ಲಿ ಕೆಡೆಟ್ ರಾಘವೇಂದ್ರ ಸ್ವಾಗತಿಸಿದರು. ಕೆಡೆಟ್ ಗಳಾದ ಯಶ್ವಂತ್ ಮತ್ತು ಪ್ರತಿಮಾ ಅವರು ವಿದ್ಯಾರ್ಥಿ ಸಾಧಕರನ್ನು ಪರಿಚಯಿಸಿದರು. ಕೆಡೆಟ್ ಉದಿತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕೆಡೆಟ್ ರಕ್ಷಿತಾ ವಂದಿಸಿದರು. ಕೆಡೆಟ್ ಸೀಮಾ ನಿರೂಪಿಸಿದರು. ಲೆಫ್ಟಿನೆಂಟ್ ಕಮಾಂಡರ್ ಡಾ. ಶ್ರೀಧರ್ ಭಟ್, ಲೆಫ್ಟಿನೆಂಟ್ ಶುಭಾ ರಾಣಿ, ನೆನಪಿನಂಗಳ ಕಾರ್ಯಕ್ರಮ ಸಂಯೋಜಕರು ಮತ್ತು ಪ್ರಾಧ್ಯಾಪಕರಾದ ಡಾ. ಎಂ. ಪಿ. ಶ್ರೀನಾಥ್, ಮತ್ತು ಶೈಲೇಶ್ ಕುಮಾರ್, ಶ್ರೀಮತಿ ಭಿಡೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version