Site icon Suddi Belthangady

ಉಜಿರೆ ಶ್ರೀ ಧ.ಮಂ.ಕಾಲೇಜಿನ ವಿದ್ಯಾರ್ಥಿಗಳು ಉಜಿರೆಯ ಪ್ರಾಥಮಿಕ ಕೇಂದ್ರಕ್ಕೆ ಭೇಟಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಎ.24ರಂದು ಉಜಿರೆ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ ಮಾಹಿತಿ ಪಡೆದುಕೊಂಡರು.ಅಲ್ಲಿ ಕೊಡುವ ಚಿಕಿತ್ಸಾ ಪದ್ದತಿಯನ್ನು ಹಾಗೂ ಕೆಲವು ಸಲಹೆಗಳನ್ನು ಪಡೆದುಕೊಂಡು ಅದರ ಮಹತ್ವವನ್ನು ತಿಳಿದುಕೊಂಡರು.

ಕೇಂದ್ರದ ಅಧಿಕಾರಿ ಡಾಕ್ಟರ್ ಗಣೇಶ್ ಹಾಗೂ ಸಿಬ್ಬಂದಿಗಳಾದ ಅಧಿತಿಯವರು ವಿದ್ಯಾರ್ಥಿಗಳಿಗೆ ಆಯುಷ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ಹಾಗೆಯೇ ಯುವ ಜನರಲ್ಲಿ ಆಯುಷ್ ಆರೋಗ್ಯದ ಬಗ್ಗೆ ಅರಿವು ಮೂಡಿಸಬೆಕೇಂದು ಹೇಳಿದರು.ಕಾಲೇಜೀನ ಪ್ರಾಂಶುಪಾಲ ಡಾ.B.A ಕುಮಾರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ.ನಾಗರಾಜ ಪೂಜಾರಿ ಅವರು ಯಶಸ್ವಿಯಾಗಿ ಕ್ಷೇತ್ರ ಅಧ್ಯಯನ ಕಾರ್ಯಕ್ರಮ ಸಂಘಟಿಸಿ ನಿರ್ವಹಣೆ ಮಾಡಿದರು. ವಿಭಾಗ ವರಿಷ್ಠ ಡಾ.ಗಣರಾಜ್ಯ ಕೆ ಎಲ್ಲಾ ರೀತಿಯ ಸಹಕಾರ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸುಮಂತ್, ಗಾಯತ್ರಿ, ವರುಣ್, ಪ್ರಜ್ವಲ್, ಧನ್ಯಶ್ರಿ, ಅಂಕಿತ, ಧನ್ಯ, ಕೌಶಿಕ್, ಪ್ರಣಮ್, ಮಹಮದ್ ತಯ್ಯುಬ್ ಭಾಗವಹಿಸಿದ್ದರು.

Exit mobile version