Site icon Suddi Belthangady

ನಾರ್ಯ: ಮುತ್ತಜ್ಜ-ಮುತ್ತಜ್ಜಿ ಬೆಳ್ಳಿಯ ದೀಪ ಬೆಳಗಿಸಿ ಮಗುವನ್ನು ನೋಡುವ ಅಪರೂಪದ ಸಂಸ್ಕೃತಿ

ಧರ್ಮಸ್ಥಳ: ಧರ್ಮಸ್ಥಳದ ನಾರ್ಯ ಎಂಬಲ್ಲಿ ಕೃಷ್ಣಪ್ಪ ಗೌಡ ಮತ್ತು ಕುಸುಮ ದಂಪತಿಯ ಮಗ ವೆಂಕಪ್ಪ ಗೌಡರ ಮಗನಾದ ಜ್ಞಾನೇಶ್ ಎಂಬವರಿಗೆ ಮಾ.೨೨ರಂದು ಜನಿಸಿದ ಗಂಡು ಮಗುವನ್ನು ಎ.೨೪ರಂದು ಮುತ್ತಜ್ಜ-ಮುತ್ತಜ್ಜಿ ಬೆಳ್ಳಿಯ ದೀಪ ಬೆಳಗಿ ಮಗುವನ್ನು ನೋಡಿ ಮಗುವಿಗೆ ಗಹನ್ ಎಂಬ ಹೆಸರನ್ನು ಇಟ್ಟು ಹಾರೈಸಿದರು.

ಹಿಂದಿನ ಕಾಲದ ಸಂಸ್ಕೃತಿಯಲ್ಲಿ ಒಂದಾದ ಮೊಮ್ಮಗನಿಗೆ ಮಗ ಹುಟ್ಟಿದಾಗ ಮುತ್ತಜ್ಜ-ಮುತ್ತಜ್ಜಿ ಬೆಳ್ಳಿಯ ದೀಪ ಬೆಳಗಿ ಮಗುವನ್ನು ನೋಡಿ ಹಾರೈಸುವ ಅಪರೂಪವಾದ ಸಂಸ್ಕೃತಿ ಕ್ರಮ ನಾರ್ಯ ಮನೆಯಲ್ಲಿ ಕಂಡುಬಂದಿದೆ.

Exit mobile version