Site icon Suddi Belthangady

ಉಜಿರೆ ಪ್ರಗತಿ ಮಹಿಳಾ ಮಂಡಲದ ವತಿಯಿಂದ ನಡೆದ ಚಿಲಿಪಿಲಿ 2023 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಉಜಿರೆ: ಕಳೆದ 10 ದಿನಗಳಿಂದ ಪ್ರಗತಿ ಮಹಿಳಾ ಮಂಡಲ ಉಜಿರೆ ಇದರ ಆಶ್ರಯದಲ್ಲಿ ನಡೆದ ಬೇಸಿಗೆ ಶಿಬಿರ ಚಿಲಿಪಿಲಿ -2023 ರ ಸಮಾರೋಪ ಸಮಾರಂಭ ಎ.20 ರಂದು ಉಜಿರೆಯ ಶಾರದಾ ಮಂಟಪದಲ್ಲಿ ‌ನಡೆಯಿತು.
ವೇದಿಕೆಯಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಜಯಶ್ರಿ ಪ್ರಕಾಶ್,ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ, ಹಾಗೂ ಬೆನಕಾ ಹೆಲ್ತ್ ಸೆಂಟರ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಜಿ.ಭಟ್, ಕಾರ್ಯದರ್ಶಿ ಗಾಯತ್ರಿ ಶ್ರೀಧರ್, ಕೋಶಾಧಿಕಾರಿ ಶ್ರೀಮತಿ ಪೂರ್ಣಿಮಾ ಸಂಜೀವ್, ಶಿಬಿರದ ನೇತ್ರತ್ವ ವಹಿಸಿದ ಶ್ರೀಮತಿ ಭವ್ಯಶ್ರೀ ಕೀರ್ತಿರಾಜ್ ಇವರುಗಳು ಉಪಸ್ಥಿತರಿದ್ದರು.
ಶಿಬಿರದ ಮಕ್ಕಳ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು.ಅಧ್ಯಕ್ಷೆ ಶ್ರೀಮತಿ ಜಯಶ್ರೀ ಪ್ರಕಾಶ್ ಸ್ವಾಗತಿಸಿದರು.

ಅತಿಥಿ ಎಸ್.ಜಿ ಭಟ್ ಮಾತನಾಡಿ ಅವರು ಇಂತಹ ಶಿಬಿರಗಳು ಮಕ್ಕಳ ಪ್ರತಿಭೆಗಳನ್ನು ಹೊರಕ್ಕೆ ತರಲು ಸಹಕಾರಿಯಾಗಿದೆ.ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಇಂತಹ ಶಿಬಿರಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ ಮಹಿಳಾ ಮಂಡಲದ ಆಶ್ರಯದಲ್ಲಿ ನಡೆದ ಶಿಬಿರ ಕ್ಕೆ ಶುಭಹಾರೈಸಿ ಮಹಿಳಾ ಮಂಡಲದಿಂದ ನಡೆಯುತ್ತಿರುವ ಇಂತಹ ಹಲವಾರು ಜನಪರ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದರು.
ಶಿಬಿರಾರ್ಥಿಗಳ ಪರವಾಗಿ ಕುಮಾರಿ ಸನ್ನಿದಿ ಮತ್ತು ವಿನುತ್ ಅವರು ತಮ್ಮ ಅನುಭವಗಳ ಬಗ್ಗೆ ಹೇಳಿದರು
ಪೋಷಕರ ಪರವಾಗಿ ಶ್ರೀಮತಿ ವನಿತಾ ಪ್ರಶಾಂತ್ ಅವರು ಮಾತನಾಡಿದರು.ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶ್ರೀಧರ್ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಪೂರ್ಣಿಮಾ ಸಂಜೀವ ವಂದಿಸಿದರು.

Exit mobile version