Site icon Suddi Belthangady

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಾಮೂಹಿಕ ವಿವಾಹ ನಿಶ್ಚಿತಾರ್ಥ

ಪುಂಜಾಲಕಟ್ಟೆ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 39 ನೇ ವರ್ಷದ ಸಂಭ್ರಮದಲ್ಲಿ 15 ನೇ ವರ್ಷದ ಸಾಮೂಹಿಕ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮ ಎ.23ರಂದು ಬಂಗ್ಲೆ ಮೈದಾನದಲ್ಲಿ ನಡೆಯಿತು.

ಸಾಮೂಹಿಕ ನಿಶ್ಚಿತಾರ್ಥದಲ್ಲಿ 11 ಜೋಡಿಗಳಿದ್ದು ಎ.30ರಂದು ನವ ವಧುವರರು ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆಯಲಿದ್ದಾರೆ.

ಸಾಮೂಹಿಕ ವಿವಾಹದ ನಿಶ್ಚಿತಾರ್ಥ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ವಸಂತ ಸುವರ್ಣ ನೇರವೇರಿಸಿ ಶುಭಕೋರಿದರು.

ಮೂರ್ಜೆ ಉದ್ಯಮಿ ನಾಗೇಶ್ ಪ್ರಭು ವಧೂವರರ ಧಾರಾ ವಸ್ತ್ರವಿತರಣೆಯನ್ನು ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಧ.ಗ್ರಾ.ಯೋಜನೆಯ ಪುಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಅಶ್ವಿನಿ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಳಾಗಿ ಉದ್ಯಮಿ ಚಂದ್ರಹಾಸ ಶೆಟ್ಟಿ, ಬಸವನ ಗುಡಿ ಗಣೇಶ್ ವುಡ್ ಇಂಡಸ್ಟ್ರೀಸ್‌ ನ ಮೂಲ್ಯ ಅನಿಲಡೆ,ಕುಕ್ಕಳ ಘಟಕದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಚಿದಾನಂದ ಕುಲಾಲ್,ಪುಂಜಾಲಕಟ್ಟೆ ಮುರುಘಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ, ಸಿದ್ದಕಟ್ಟೆ ಗುತ್ತಿಗೆದಾರ ದೀಪಕ್ ಶೆಟ್ಟಿಗಾರ್, ಕುತ್ತಿಲ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೀರೀಶ್ ಸಾಲಿಯಾನ್ ಹೆಗ್ಗಡೆಬೆಟ್ಟುಗುತ್ತು, ಶ್ರೀ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಅತ್ತಾಜೆ, ಗ್ರಾ.ಪಂ ಸದಸ್ಯ ಕಾಂತಪ್ಪ ,ಸತ್ಯಸಾರಮಾನಿ ದೈವಸ್ಥಾನದ ಆಡಳಿತ ಮೊಕ್ತೆಸರ ಹರಿಯಪ್ಪ ಪುತ್ತೂರು, ವಾಮದ ಪದವ್ ಸಹಕಾರಿ ದುರೀಣ
ಯಶೋದರ ಶೆಟ್ಟಿ ,ಕ್ಲಬ್ ನ ಅಧ್ಯಕ್ಷ ಪ್ರಶಾಂತ ಪೂಜಾರಿ, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ ಉಪಸ್ಥಿತರಿದ್ದರು.ಅಮೃತಾ ಪ್ರಾರ್ಥಿಸಿದರು. ಪ್ರಭಾಕರ್ ಪಿ.ಎಮ್
ಸ್ವಾಗತಿಸಿದರು,ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್
ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ ಪ್ರಾಸ್ತವಿಕ
ಮಾತನಾಡಿದರು.ಕ್ಲಬ್ ನ ಪದಾಧಿಕಾರಿಗಳು
ಸಹಕರಿಸಿದರು.

Exit mobile version