ಧರ್ಮಸ್ಥಳ: ಆರು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದು, ಪೋಷಕರಿಗಾಗಿ ಹುಡುಕಾಟ ನಡೆಸಿ ಪೋಷಕರಿಗೆ ಒಪ್ಪಿಸಿದ ಘಟನೆ ಇಂದು ಏ.22 ರಂದು ನಡೆದಿದೆ. ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದಾರೆ. ಮಗು ಆಳುತ್ತಿದ್ದ ಬಗ್ಗೆ ಗಮನಿಸಿದ ಭಕ್ತರು ಧರ್ಮಸ್ಥಳ ಮಾಹಿತಿ ಕಚೇರಿಗೆ ತಲುಪಿಸಿ ವಿಚಾರಿಸಿದಾಗ ಮನೆಯವರು ಮಿಸ್ ಅಗಿರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ ಅವರು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಮಗುವನ್ನು ಹೆತ್ತವರ ಬಗ್ಗೆ ವಿಚಾರಿಸಿದಾಗ ಗದಗ ಜಿಲ್ಲೆಯ ಲಕ್ಷ್ಮೀಶರ ತಾಲೂಕಿನ ಚಿಲ್ಲೂರು ನಿವಾಸಿ ಮಂಜಪ್ಪ ಹಡಪದ ಮತ್ತು ನಿರ್ಮಲಾ ದಂಪತಿಗಳ ನಯನಾ ಎಂದು ಹೇಳುತ್ತಿದ್ದು. ಮಗು ಸುರಕ್ಷಿತವಾಗಿ ಧರ್ಮಸ್ಥಳ ಪೊಲೀಸರ ರಕ್ಷಣೆಯಲ್ಲಿ ರಕ್ಷಣೆ ಮಾಡಿ ಹೆತ್ತವರಿಗೆ ಒಪ್ಪಿಸಿದ್ದಾರೆ. ಎಂದು ಎಸ್ ಐ ಅನಿಲ್ ಕುಮಾರ್ ತಿಳಿಸಿದ್ದಾರೆ