ಉಜಿರೆ: ಇಲ್ಲಿಯ ನಾಗರಾಜ್ ಕಾಂಪೊಂಡ್ ನಲ್ಲಿ ಎ.21ರಂದು ರಾತ್ರಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಇಲ್ಲಿನ ನಿವಾಸಿ ಪ್ರಸಾದ್ ಎಂಬುವವರ ಮನೆ ಮುಂದೆ ಕಾಣಿಸಿಕೊಂಡ ಈ ಹೆಬ್ಬಾವನ್ನು ಬೆಳ್ತಂಗಡಿಯ ಯುವ ಉರಗ ತಜ್ಞ ಪ್ರೇಮ್ ಸಾಗರ್ ರಕ್ಷಿಸಿ, ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
ಬೇಸಿಗೆ ಬಿಸಿ ಹೆಚ್ಚಾದಂತೆ ಹಾವುಗಳು ತಂಪು ಜಾಗ ಹಾಗೂ ಆಹಾರವನ್ನು ಅರಸುತ್ತಾ ಮನೆಗಳ ಸಮೀಪ ಸುಳಿಯುವ ಸಾಧ್ಯತೆ ಹೆಚ್ಚಾಗಿದ್ದು, ಎಚ್ಚರಿಕೆಯಿಂದ ಇರುವಂತೆ ಪ್ರೇಮ್ ಸಾಗರ್ ಮಾಹಿತಿ ನೀಡಿದ್ದಾರೆ.