ನೆರಿಯ: ಜಗತ್ತಿನ ಅಪರೂಪದ ವಿಷಯಗಳಲ್ಲಿ ಅವಳಿ – ಜವಳಿ ಮಕ್ಕಳು ಹುಟ್ಟುವುದು ಕೂಡ ಒಂದು. ಆದರೆ ಅವರು ಸಮಾನ ಅಂಕಗಳನ್ನು ಒಂದೇ ಪರೀಕ್ಷೆಯಲ್ಲಿ ಪಡೆದುಕೊಂಡಿರುವುದು ನಿಜಕ್ಕೂ ಅಚ್ಚರಿ. ಇಂತಹ ಸಾಧನೆ ಮಾಡಿದ ಅವಳಿ ಸಹೋದರಿಯರು ನೆರಿಯ ಗ್ರಾಮದ ಪುಣ್ಕೆದಡಿ ಉಮೇಶ್ ಗೌಡ ಪಿ.ಹೆಚ್ ಮತ್ತು ಗೀತಾ ದಂಪತಿಗಳ ಅವಳಿ ಮಕ್ಕಳಾದ ಕು.ಸ್ಪಂದನಾ ಮತ್ತು ಕು. ಸ್ಪರ್ಷಾ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 594 ಸಮಾನ ಅಂಕವನ್ನು ಪಡೆದು ಶೇ.99 ಫಲಿತಾಂಶ ಪಡೆದುಕೊಂಡಿರುತ್ತಾರೆ.
ಇವರು ಎಸ್ ಡಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದು, ನೆರಿಯ ಹೊನ್ನಪ್ಪ ಗೌಡ ಮತ್ತು ಗಿರಿಜ ಇವರ ಮೊಮ್ಮಕ್ಕಳಾಗಿದ್ದಾರೆ.