
ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಒಟ್ಟು 10 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇವರ ಪೈಕಿ ಕೆಲವರು ಎರಡು ನಾಮಪತ್ರ ಸಲ್ಲಿಸಿದ್ದಾರೆ.ಹೀಗಾಗಿ ಒಟ್ಟು 10 ಅಭ್ಯರ್ಥಿಗಳಿಂದ 14 ನಾಮಪತ್ರ ಸಲ್ಲಿಕೆಯಾಗಿತ್ತು.
ಇವುಗಳಲ್ಲಿ 10 ಅಭ್ಯರ್ಥಿಗಳ ತಲಾ ಒಂದೊಂದು ನಾಮಪತ್ರ ಪುರಸ್ಕೃತವಾಗಿದ್ದು, ಯಾವ ಅಭ್ಯರ್ಥಿಯ ನಾಮಪತ್ರವೂ ಕೂಡ ತಿರಸ್ಕಾರಗೊಂಡಿಲ್ಲ.ಈ ಮೂಲಕ ನಾಮಪತ್ರದ ಪರಿಶೀಲನೆ ಮುಗಿದಿದೆ. ಈ ಪ್ರಕಾರ ಕಣದಲ್ಲಿ ಬಿಜೆಪಿಯಿಂದ ಹರೀಶ್ ಪೂಂಜ, ಕಾಂಗ್ರೆಸ್ ನಿಂದ ರಕ್ಷಿ್ತ್ ಶಿವರಾಂ, ಎಸ್ ಡಿ ಪಿ ಐ ನಿಂದ ಅಕ್ಬರ್ ಹಾಗೂ ನವಾಜ್ ಷರೀಫ್, ಜೆಡಿಎಸ್ ನಿಂದ ಅಶ್ರಫ್ ಅಲಿ, ಸರ್ವೊದಯ ಕರ್ನಾಟಕ ಪಕ್ಷದಿಂದ ಆದಿತ್ಯ ನಾರಾಯಣ ಕೊಲ್ಲಾಜೆ, ತುಳುವೆರೆ ಪಕ್ಷದಿಂದ ಶೈಲೇಶ್ ಆರ್ ಜೆ, ಆಮ್ ಆದ್ಮಿ ಪಾರ್ಟಿಯಿಂದ ಜನಾರ್ಧನ್, ಪಕ್ಷೇತರರಾಗಿ ಮಹೇಶ್ ಮತ್ತು ಸುಬ್ರಹ್ಮಣ್ಯ ಭಟ್ ಸಲ್ಲಿಸಿರುವ ನಾಮಪತ್ರ ಪುರಸ್ಕೃತವಾಗಿದೆ.
ನಾಮಪತ್ರ ಹಿಂತೆಗೆದುಕೊಳ್ಳಲು ಏಪ್ರಿಲ್ 24 ಕಡೆಯ ದಿನವಾಗಿದೆ.