Site icon Suddi Belthangady

ಮರೋಡಿ: ಏ.22ರಂದು ಮರೋಡಿ ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ವತಿಯಿಂದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆ

ಮರೋಡಿ: ಮರೋಡಿ ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ (ರಿ) ಇದರ ವತಿಯಿಂದ ಸುಬ್ರಹ್ಮಣ್ಯ ಪ್ರಸಾದ್‌ ನೇತೃತ್ವದಲ್ಲಿ 9ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ ಪೂಜೆಯು ಏ.22ರಂದು ಶನಿವಾರ ಸಂಜೆ 4ರಿಂದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಜರುಗಲಿದೆ.

ಈ ಪ್ರಯುಕ್ತ ರಾತ್ರಿ 7.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಂಗಳೂರಿನ ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಇದರ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸುವರು. ಕಂಬಳ ಕ್ಷೇತ್ರದ ಸಾಧಕ, ಉದ್ಯಮಿ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಶಿರ್ತಾಡಿ ಪ್ರಭಾ ಕ್ಲಿನಿಕ್‌ನ ಡಾ.ಆಶೀರ್ವಾದ್‌, ಪ್ರಗತಿಪರ ಕೃಷಿಕ ರವೀಂದ್ರ ಹೆಗ್ಡೆ ಉಚ್ಚೂರು, ಶ್ರೀ ಉಮಾಮಹೇಶ್ವರ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ ಇದರ ಅಧ್ಯಕ್ಷ ರಾಘವ ಪೂಜಾರಿ, ಯುವ ಉದ್ಯಮಿ ದಿನೇಶ್‌ ಬುಣ್ಣಾನ್ ಇಸ್ರೇಲ್‌ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಂಜೆ 4ಗಂಟೆಗೆ ಕಲಶ ಪ್ರತಿಷ್ಠೆ, ಶ್ರೀ ಶನೈಶ್ವರ ಪೂಜೆ ಆರಂಭ, 6.30ಕ್ಕೆ ಶ್ರೀ ಉಮಾಮಹೇಶ್ವರ ದೇವರಿಗೆ ರಂಗಪೂಜೆ, ರಾತ್ರಿ 7.30ಕ್ಕೆ ಧಾರ್ಮಿಕ ಸಭೆ, 8 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಪ್ರಸಾದ ವಿತರಣೆ, 8.30ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಉಮೇಶ್‌ ಮಿಜಾರ್‌ ಸಾರಥ್ಯದ ನಮ್ಮ ಕಲಾವಿದೆರ್‌ ಬೆದ್ರ ಇವರಿಂದ ‘ಕುಸಲ್ದ ಗೊಬ್ಬು’ ತುಳು ಹಾಸ್ಯಮಯ ನಾಟಕ (ಅಪ್ಪೆ ಮಂತ್ರದೇವತೆನ ಮೈಮೆನ್‌ ಸಾರುನ ನಾಟಕ) ಪ್ರದರ್ಶನವಿದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ತಾವೆಲ್ಲರೂ ತನು– ಮನ– ಧನಗಳಿಂದ ಭಾಗವಹಿಸಿ, ದೇವರ ಪ್ರಸಾದ ಸ್ವೀಕರಿಸುವಂತೆ ಕೋರಲಾಗಿದೆ.

Exit mobile version