
ನೆರಿಯ: ಇಲ್ಲಿಯ ಶ್ರೀ ಕ್ಷೇತ್ರ ಕಾಟಾಜೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಎ.25 ಮತ್ತು 26 ರವರೆಗೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಎ.25 ರಂದು ಸಂಜೆ ತೋರಣ ಮುಹೂರ್ತ, ಬಳಿಕ ವೈದಿಕ ಕಾರ್ಯಕ್ರಮಗಳು, ರಾತ್ರಿ ಪೂಜೆ ಪ್ರಸಾದ ವಿತರಣೆ. ರಾತ್ರಿ ಭಜನಾ ಕಮ್ಮಟ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಎ.26 ರಂದು ಬೆಳಿಗ್ಗೆ ಗಣಹೋಮ, ಬಿಂಬ ಶುದ್ಧಿ, ಕಲಸ ಪೂಜೆ, ಕಲಶಾಭಿಷೇಕ, ಚಿತ್ರಕೂಟದಲ್ಲಿ ನಾಗ ಪೂಜೆ, ಪರಿವಾರ ದೈವಗಳಿಗೆ ಪೂಜೆ, ಮಹಾ ಪೂಜೆ, ಪ್ರಸಾದ ವಿತರಣೆ, ರಾತ್ರಿ ಪೂಜೆ, ಶ್ರೀ ಭೂತಬಲಿ ಉತ್ಸವ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.ರಾತ್ರಿ ಶಾಲಾ ಮಕ್ಕಳಿಂದ ಸಾಂಸ್ಕೃಕ ಕಾರ್ಯಕ್ರಮ, ನಾಟಕ ಜರಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಎ.ಜಯದೇವ್ ತಿಳಿಸಿದ್ದಾರೆ