
ಬೆಳ್ತಂಗಡಿ: ಎ.20ರಂದು ಗುರುನಾರಾಯಣ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಎಐಸಿಸಿ ಬೆಳ್ತಂಗಡಿಯ ಉಸ್ತವಾರಿ ಆಗಿರುವ ಕಣ್ಣೂರಿನ ಇರಿಕ್ಕೂರು ಕ್ಷೇತ್ರದ ಶಾಸಕ ಸಜೀವ್ ಜೋಸೆಫ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿದ್ದು, ಜೀವನ ನಡೆಸುವುದೇ ಅಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆಗೆ ಒತ್ತು ನೀಡಿ ಹಲವು ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ನಡೆದಿದ್ದು, ಜನತೆ ಕಾಂಗ್ರೆಸ್ ಪರ ಒಲವು ತೋರಿದ್ದಾರೆ. ಕಾಂಗ್ರೆೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯುವ ನಾಯಕರಿಗೆ ಅವಕಾಶ ನೀಡಿದ್ದಾಾರೆ. ಈ ಬಾರಿ ಬೆಳ್ತಂಗಡಿಯಲ್ಲಿ ರಕ್ಷಿಿತ್ ಶಿವರಾಂ ಅವರನ್ನು ಗೆಲ್ಲಿಸಲು ನಾವು ಬೆಂಬಲ ನೀಡಿದ್ದು, ಸ್ಪಷ್ಟ ಬಹುಮತದಲ್ಲಿ ಕಾಂಗ್ರೆೆಸ್ ಅಧಿಕಾರ ಹಿಡಿಯಲಿದೆ ಎಂದ ಆಶಯ ವ್ಯಕ್ತಪಡಿಸಿದರು.
22ಕ್ಕೆ ಉಜಿರೆಗೆ ಡಿಕೆಶಿ: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎ.22ರಂದು ಉಜಿರೆಗೆ ಆಗಮಿಸಲಿದ್ದು, ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ತಿಳಿಸಿದರು.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಪ್ರಚಾರ ಸಮಿತಿ ಸಂಯೋಜಕ ಜಿ.ಭಗೀರಥ, ಮುಖಂಡರಾದ ಮನೋಹರ್ ಕುಮಾರ್ ಇಳಂತಿಲ, ಶೇಖರ್ ಕುಕ್ಕೇಡಿ, ಸತೀಶ್ ಕೆ. ಕಾಶಿಪಟ್ನ, ಪ್ರವೀಣ್ ಗೌಡ, ಜೈಸನ್ ಪಟ್ಟೆರಿಲ್, ಮ್ಯಾಾಕ್ಸಿ ಸಿಕ್ವೇರಾ ಉಪಸ್ಥಿತರಿದ್ದರು.