
ಮಚ್ಚಿನ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಚ್ಚಿನ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಮಚ್ಚಿನ, ಪ್ರಗತಿ ಬಂಧು ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಎ ಬಿ ಸಿ ಒಕ್ಕೂಟಗಳು ಮಚ್ಚಿನ, ಜನಜಾಗೃತಿ ಗ್ರಾಮ ಸಮಿತಿ ಮಚ್ಚಿನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎ.18 ರಂದು 37ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ನಡೆಯಿತು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ಹರ್ಷ ಬಳ್ಳಮಂಜ, ಒಕ್ಕೂಟಗಳ ಅಧ್ಯಕ್ಷರಾದ ಹರೀಶ್ ಸುವರ್ಣ ನಾರಾಯಣಗೌಡ, ಧರ್ಣಪ್ಪ ಗೌಡ, ಜಯ ಮುದಲಡ್ಕ, ಜನಜಾಗೃತಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಗೋಪಾಲ ಪೂಜಾರಿ ಕೋಲಾಜೆ, ಸೇವಾ ಪ್ರತಿನಿಧಿಗಳಾದ ಪರಮೇಶ್ವರ್, ಶ್ರೀಮತಿ ಮಂಜುಳಾ, ಶ್ರೀಮತಿ ವೇದ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಊರವರು ಉಪಸ್ಥಿತರಿದ್ದರು.