Site icon Suddi Belthangady

ಧರ್ಮಸ್ಥಳದ ನಾರ್ಯ ಮಲಯಾಳ ಗುಡ್ಡದಲ್ಲಿ ಹೊತ್ತಿ ಉರಿದ ಕಾಡು – ಬೆಂಕಿ ನಂದಿಸಲು ಸ್ಥಳೀಯರ ಹರಸಾಹಸ – ಅಗ್ನಿಶಾಮಕ ದಳದ ನೆರವು

ಧರ್ಮಸ್ಥಳ: ಬೆಳ್ತಂಗಡಿ ತಾಲೂಕಿನಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಳೆದ ಅನೇಕ ದಿನಗಳಿಂದ ಅಲ್ಲಲ್ಲಿ ಕಾಡಿನಲ್ಲಿ ಬೆಂಕಿ ಉರಿಯುತ್ತಿದ್ದು ಇದೀಗಾ ಎ.19 ರಂದು ಧರ್ಮಸ್ಥಳದ ನಾರ್ಯದ ಮಲಯಾಳ ಗುಡ್ಡೆಯಲ್ಲಿ ಬೆಂಕಿ ಇಡೀ ಗುಡ್ಡವನ್ನು ಆವರಿಸಿರುವ ಘಟನೆ ನಡೆದಿದೆ.
ಮಧ್ಯಾಹ್ನದ ಬಿರು ಬಿಸಿಲಿನ ನಡುವೆ ಸುಮಾರು 1 ಕಿಲೋಮೀಟರ್ ಗೂ ಅಧಿಕ ದೂರದವರೆಗೆ ಬೆಂಕಿ ವ್ಯಾಪಿಸಿದ್ದನ್ನು ನೋಡಿದ ಸ್ಥಳೀಯರು ಆತಂಕಗೊಂಡಿದ್ದರು. ಕೂಡಲೇ ಸ್ಪಂಧಿಸಿದ ಸ್ಥಳೀಯರು ಬೆಂಕಿ‌ ನಂದಿಸುವ ಕೆಲಸಕ್ಕೆ ಮುಂದಾದರೂ ಬಿಸಿಲಿನ ತಾಪ, ಬೆಂಕಿಯ ಅಬ್ಬರದ ನಡುವೆ ಹರಸಾಹಸ ಪಟ್ಟರು.


ಈ ವೇಳೆ ಅಗ್ನಿಶಾಮಕದಳದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಿದೆ. ಈ‌ವೇಳೆ‌ ಗ್ರಾ.ಪಂ ಸದಸ್ಯ‌ ಸುಧಾಕರ್ ಗೌಡ, ಪದ್ಮಗೌಡ, ಸುಂದರ ಗೌಡ ಮಲಯಾಳ,ಜನಾರ್ಧನ್ ಗೌಡ, ದಿನೇಶ್, ಮೋಹನ್ ಅರಿಕೋಡಿ, ದಿನೇಶ್ ಈದಾ ಅರಣ್ಯ ಇಲಾಖೆಯ ಸದಾನಂದ, ಶರತ್, ಹರಿಪ್ರಸಾದ್, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕೆಲಸದಲ್ಲಿ‌ ಕೈ ಜೋಡಿಸಿದ್ದಾರೆ

Exit mobile version