ಅಳದಂಗಡಿ: ಪಿಲ್ಯ ಗ್ರಾಮದ ನಿನ್ನಿಕಲ್ಲು ಚೆನ್ನ ಮತ್ತು ನೀಲಮ್ಮ ದಂಪತಿಯ ಪುತ್ರ ಪ್ರಶಾಂತ ಏಳನೇ ತರಗತಿ ಶಿಕ್ಷಣವನ್ನು ಪಡೆದುಕೊಂಡಿದ್ದು, ಆರ್ಥಿಕ ಸಮಸ್ಯೆಯಿಂದ ಶಿಕ್ಷಣವನ್ನು ಮುಂದುವರಿಸಲಾಗದೆ ಕೂಲಿ ಕೆಲಸವನ್ನು ಮಾಡಿಕೊಂಡು ತನ್ನ ಕುಟುಂಬಕ್ಕೆ ಆಧಾರವಾಗಿದ್ದುಕೊಂಡು, ಜೀವನ ನಡೆಸುತ್ತಿದ್ದ ಪ್ರಶಾಂತನಿಗೆ ಕಳೆದ ವರ್ಷ ತನ್ನಿಂದ ತಾನೆ ತಲೆನೋವು ಕಾಣಿಸಿಕೊಂಡು ತನ್ನ ಎರಡು ಕಣ್ಣುಗಳು ಕಾಣಿಸದಂತೆ ಆಗಿರುತ್ತದೆ.ದೇರಳಕಟ್ಟೆ ಆಸ್ಪತ್ರೆಯ ವೈದ್ಯಯರಲ್ಲಿ ತೋರಿಸಿದಾಗ ಬ್ರೈನ್ಟ್ಯೂಮರ್ಗೆ ಒಳಗಾಗಿದ್ದು ತಲೆಯಲ್ಲಿ ಗೆಡ್ಡೆ ಇರುವುದು ಪತ್ತೆಯಾಯಿತು.ಶಸ್ತ್ರಚಿಕಿತ್ಸೆ ಮಾಡಿ ಗೆಡ್ಡೆಯನ್ನು ಹೊರತೆಗೆದರು ತನ್ನ ಎರಡು ಕಣ್ಣುಗಳ ದೃಷ್ಟಿ ಕಳೆದು ಹೋಗಿದ್ದು. ಸರಿಸುಮಾರು ರೂಪಾಯಿ ನಾಲ್ಕು ಲಕ್ಷಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದರು ತನ್ನ ದೃಷ್ಟಿ ಬರದೆ ಇರುವುದು ಒಂದು ಕಡೆಯಾದರೆ ಕೂಲಿ ಕೆಲಸ ಮಾಡಿಕೊಂಡು ಮಗನ ಚಿಕಿತ್ಸೆಗೆ ಸಾಲ ಮಾಡಿ ಅತ್ತ ಸಾಲವನ್ನು ತೀರಿಸಲಾಗದೆ ಮಗನಿಗೆ ಕಣ್ಣು ಕಾಣದೆ ಹೊರ ಜಗತ್ತನ್ನು ನೋಡಲಾಗದ ಪರಿಸ್ಥಿತಿಯಲ್ಲಿ ಇರುವ ಕುಟುಂಬಕ್ಕೆ ದಾನಿಗಳ ನೆರವನ್ನು ಬಯಸಿದ್ದಾರೆ.
ಬ್ಯಾಂಕ್ ಖಾತೆ ವಿವರ:
Account Name : UNION BANK
Account Number : 520441029496301
Name : PRAMEELA
IFSC Code : UBINO903507
Mobile Number : 8147455156