Site icon Suddi Belthangady

ಸೌತಡ್ಕದಲ್ಲಿ ಹಿಂದೂ ಸಂಸ್ಕಾರ ಶಿಬಿರ

ಕೊಕ್ಕಡ: ಭಾರತದ 51 ಶಕ್ತಿ ಪೀಠಗಳು ಇಡೀ ಭಾರತವನ್ನು ಶಕ್ತಿ ಸ್ವರೂಪಿಣಿಯಾಗಿ ನೋಡುವಂತೆ ಮಾಡಿದೆ. ನಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಮೂಡಿಸಲು ಹಿಂದೂ ಸಂಸ್ಕಾರ ಶಿಬಿರಗಳು ಸಹಕಾರಿ. ಭಾರತ ಕೇವಲ ಪುಣ್ಯಭೂಮಿ ಮಾತ್ರವಲ್ಲ ಕರ್ಮಭೂಮಿಯು ಹೌದು.ವೇದಗಳು ನಮಗೆ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳನ್ನು ವಿಭಜಿಸಿ ಹೀಗೆಯೇ ಬದುಕಬೇಕೆಂಬ ಸಂದೇಶವನ್ನು ಸಾರಿದೆ. ಹಲವು ಆಕ್ರಮಣಗಳ ಬಳಿಕವೂ ಭಾರತ ಇಂದಿಗೂ ತಮ್ಮ ಮೂಲ ಸಂಸ್ಕೃತಿಯನ್ನು ಪಾಲನೆ ಮಾಡಿಕೊಂಡು ಬರುತ್ತಿದೆ. ಹಾಗಾಗಿ ಜಗತ್ತಿನಲ್ಲಿ ಭಾರತ ಶ್ರೇಷ್ಠ ರಾಷ್ಟçವಾಗಿ ಉಳಿದಿದೆ ಎಂದು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಪ್ರಜ್ವಲ್ ಜೆ ನುಡಿದರು.ಶ್ರೀ ಕ್ಷೇತ್ರ ಸೌತಡ್ಕದ ಗಣೇಶ ಕಲಾ ಮಂದಿರದಲ್ಲಿ ಶ್ರೀ ಕ್ಷೇತ್ರ ಸೌತಡ್ಕ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ, ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರು ಸಹಯೋಗದಲ್ಲಿ ಆಯೋಜನೆಗೊಂಡ ಹಿಂದೂ ಸಂಸ್ಕಾರ ಶಿಬಿರ 2023 ರ ಸಮಾರೋಪ ಕಾರ್ಯಕ್ರಮದಲ್ಲಿ ಭೌಧಿಕ್ ನೀಡಿದರು.

ಕಾರ್ಯಕ್ರಮವನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶ್ರೀಕ್ಷೇತ್ರ ಸೌತಡ್ಕದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ ವಹಿಸಿದ್ದರು. ಭಾರತ ಪೂಜನ ಕಾರ್ಯಕ್ರಮದ ಅಂಗವಾಗಿ ಶಿಬಿರಾರ್ಥಿಗಳ ಪೋಷಕರಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಲಾಯಿತು.
ಶಿಬಿರಾರ್ಥಿಗಳ ಸರಸ್ವತಿ ವಂದಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಣೇಶ್ ಕೆ. ಹಿತ್ತಿಲು ಸ್ವಾಗತಿಸಿ, ಸುದರ್ಶನ ಹಿತ್ತಿಲು ವಂದಿಸಿದರು. ಕೇಶವ ಹಳ್ಳಿಂಗೇರಿ ಕಾರ್ಯಕ್ರಮ ನಿರೂಪಿಸಿದರು.

Exit mobile version