ಬೆಳ್ತಂಗಡಿ, ಮಾ.೨೭: ಕುಕ್ಕೇಡಿ ಗ್ರಾಮದ ಉಳ್ತೂರು ಮನೆ ನಿವಾಸಿ ಮಹಮ್ಮದ್ ಎಂಬವರ ಪುತ್ರ ಆಸಿಮ್(೨೯) ಎಂಬಾತನು ೨೦೧೫ರಲ್ಲಿ ಪೋಕ್ಸ್ ಪ್ರಕರಣದ ಆರೋಪಿತ ತಲೆಮರೆಸಿಕೊಂಡಿದ್ದು ಈತನ ಪತ್ತೆಗಾಗಿ ಪೊಲೀಸ್ ಇಲಾಖೆ ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.
ಆತನ ವಿರುದ್ಧ ಮಂಗಳೂರು ಪೋಕ್ಸೋ ನ್ಯಾಯಾಲಯ ಪತ್ತೆಯ ಬಗ್ಗೆ ಉದ್ಘೋಷಣೆ ಹೊರಡಿಸಿದೆ. ಆರೋಪಿತ ಆಸಿಮ್ನ ಕುರಿತು ಸುಳಿವು ಸಿಕ್ಕಲ್ಲಿ ವೇಣೂರು ಪೊಲೀಸ್ ಠಾಣೆ ಉಪನಿರೀಕ್ಷಕರ ದೂರವಾಣಿ ೯೪೮೦೮೦೫೩೭೨ ಅಥವಾ ಠಾಣೆ ಸಂಖ್ಯೆ ೦೮೨೫೬-೨೮೬೨೩೨ ಸಂಪರ್ಕಿಸುವಂತೆ ಕೋರಲಾಗಿದೆ.