ಉಜಿರೆ: ಕುದುರೆಮುಖದಲ್ಲಿ ಇರುವ ಲಕ್ಯ ಅಣೆಕಟ್ಟುವಿನ ಸುತ್ತಲಿನ ಪರಿಸರದಲ್ಲಿ ಜೀವ ವೈವಿಧ್ಯತೆಗಳ ರಕ್ಷಣೆ ಕುರಿತು ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು, ಪ್ರಾಣಿಗಳ ಗಣತಿ ಕಾರ್ಯಗಳಲ್ಲಿ ಅನುಸರಿಸುವ ವೈಜ್ಞಾನಿಕ ಕ್ರಮಗಳ ಬಗ್ಗೆ ಮತ್ತು ಕಾಡ್ಗಿಚ್ಚು ಸಂದರ್ಭಲ್ಲಿ ಕೈಗೊಂಡ ಕ್ರಮಗಳ ಕುರಿತು ವಿವರ ನೀಡಿದರು. ಜೊತೆಗೆ ಪರಿಸರ ಸಂರಕ್ಷಣೆ, ಮತ್ತು ಗ್ರಾಮ ಅರಣ್ಯ ಕಾರ್ಯಕ್ರಮ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳು ಹಮ್ಮಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಅರಣ್ಯಾಧಿಕಾರಿ ಮಹಮೂದ್ ಮೆಹಬೂಬ್ ರವರು ಮಾರ್ಗದರ್ಶನ ನೀಡಿದರು ಕಾಲೇಜಿನ ಪ್ರಾಂಶುಪಾಲ ಡಾ.B.A ಕುಮಾರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಡಾ.ನಾಗರಾಜ ಪೂಜಾರಿ ಮತ್ತು ಡಾ.ಯುವರಾಜ್ ಮತ್ತು ಅಭಿನಂದನ್ ಜೈನ್ ಅವರ ತಂಡವು ಯಶಸ್ವಿಯಾಗಿ ವಿಹಾರ ಕಲಿಕೆ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಣೆ ಮಾಡಿದರು.ವಿಭಾಗ ವರಿಷ್ಠ ಡಾ.ಗಣರಾಜ್ ಕೆ ಸಹಕಾರ ನೀಡಿದರು.