Site icon Suddi Belthangady

ಶ್ರೀ ಧ.ಮಂ.ಕಾಲೇಜು ಉಜಿರೆ ವತಿಯಿಂದ ಸಂಸೆಯಲ್ಲಿ ವಿಹಾರ ಕಲಿಕೆ ಕಾರ್ಯಕ್ರಮ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ವಿಹಾರ ಕಲಿಕೆ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸಂಸೆಯಲ್ಲಿರುವ ಚಹಾ ಮತ್ತು ಕಾಫಿ ತೋಟಕ್ಕೆ ಭೇಟಿ ನೀಡಿ ಚಹಾ ಮತ್ತು ಕಾಫಿಯ ವಿವಿಧ ತಳಿಗಳು ಮತ್ತು ಅವುಗಳಿಂದ ಆಗುವ ವಿವಿಧ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಟೀ ಮತ್ತು ಕಾಫೀ ತೋಟದಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ನೀಡಿದ ಸವಲತ್ತು ಮತ್ತು ಸೌಲಭ್ಯಗಳ ಬಗ್ಗೆ ವಿವರ ನೀಡಿ ಕಾರ್ಮಿಕರ ಕೊರತೆ ನಿವಾರಿಸಲು ವಿದ್ಯಾರ್ಥಿಗಳು ಸಂಶೋದನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಮತ್ತು ಕಾರ್ಮಿಕರಿಗೆ ಜಾಗ್ರತಿ ಮೂಡಿಸುವ ಕಾರ್ಯಕ್ರಮ ವಿದ್ಯಾರ್ಥಿಗಳು ಹಮ್ಮಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾಣಿಕ್ಯ ರಾಜ್ ಮತ್ತು ಸುಕುಮಾರ ಜೈನ್ ರವರು ಮಾರ್ಗದರ್ಶನ ನೀಡಿದರು ತೋಟಗಾರಿಕಾ ಬೆಳೆಗೆಳು ಭವಿಷ್ಯದಲ್ಲಿ ಆರ್ಥಿಕತೆಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೇಗೆ ಪ್ರಯೋಜನಕಾರಿ ಎಂಬ ವಿಷಯದ ಕುರಿತು ಮನವರಿಕೆ ಮಾಡಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.B.A ಕುಮಾರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ.ನಾಗರಾಜ ಪೂಜಾರಿ ಮತ್ತು ಡಾ.ಯುವರಾಜ್ ಮತ್ತು ಅಭಿನಂದನ್ ಜೈನ್  ರವರ ತಂಡವು ಯಶಸ್ವಿಯಾಗಿ ವಿಹಾರ ಕಲಿಕೆ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಣೆ ಮಾಡಿದರು.ವಿಭಾಗ ವರಿಷ್ಠ ಡಾ.ಗಣರಾಜ್.ಕೆ ಎಲ್ಲಾ ರೀತಿಯ ಸಹಕಾರ ನೀಡಿದರು.

Exit mobile version