Site icon Suddi Belthangady

ಉಜಿರೆಯ ಶ್ರೀ ಧ.ಮಂ.ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನಿಯುಕ್ತರಾಗಿರುವ ಡಾ.ಬಿ.ಎ ಕುಮಾರ ಹೆಗ್ಡೆ ಇವರಿಗೆ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಗೌರವಾರ್ಪಣೆ

ಉಜಿರೆ: ಉಜಿರೆಯ ಎಸ್.ಡಿ.ಎಮ್ ಕಾಲೇಜಿನಲ್ಲಿ, ಕಳೆದ 35 ವರ್ಷಗಳಿಂದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಕಾಲೇಜಿನ ವಿಜ್ಞಾನ ನಿಕಾಯದ ಮುಖ್ಯಸ್ಥರಾಗಿದ್ದ ಡಾ|| ಬಿ.ಎ.ಕುಮಾರ್ ಹೆಗ್ಡೆ ಇವರು ಕಳೆದ ಮಾ.31ರಂದು ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶ್ರೀ ಎಂ.ವೈ. ಹರೀಶ್ ಕಾರ್ಯನಿರ್ವಾಹಕ ಅಧಿಕಾರಿಗಳು ಎಸ್.ಡಿ.ಎಮ್.ಇ.ಸೊಸೈಟಿ ಇವರು ಶಾಲು ಹೊದಿಸಿ ಸನ್ಮಾನಿಸಿದರು.ನಂತರ ವಿದ್ಯಾರ್ಥಿಗಳಿಂದಲೇ ತಯಾರಿಸಲ್ಪಟ್ಟಂತಹ ಭಿತ್ತಿಪತ್ರವನ್ನು ಅನಾವರಣಗೊಳಿಸಲಾಯಿತು.

ನಂತರದಲ್ಲಿ ಸನ್ಮಾನಿತರಾದಂತಹ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ.ಕುಮಾರ ಹೆಗ್ಡೆ ಅವರು ಮಾತನಾಡಿ, ‘ವಿದ್ಯಾರ್ಥಿಗಳೊಂದಿಗಿನ ತಮ್ಮ ಸಾವಿರ ಸವಿನೆನಪುಗಳು, ಸಾವಿರ ಕಾಲಕ್ಕೂ ಸವೆಯದಂತಹದ್ದು’ ಎಂದರು.ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವಂತಹ ಶ್ರೀ ಅಭಿಲಾಷ್ ಕೆ.ಎಸ್. ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಗಣ್ಯರನ್ನು ಮತ್ತು ನೆರೆದಿರುವವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಕಾರ್ಯಕ್ರಮವನ್ನು ಶ್ರೇಯಸ್ ಮತ್ತು ಕುಮಾರಿ ಶ್ರದ್ಧಾ ಇವರು ನಿರೂಪಿಸಿ, ಕುಮಾರಿ ಹರ್ಷ ಇವರು ಧನ್ಯವಾದವಿತ್ತರು.ಸಹಾಯಕ ಪ್ರಾಧ್ಯಾಪಕರಾದ ಕು| ಶಕುಂತಲಾ ಹಾಗೂ ಕು| ಸ್ವಾತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Exit mobile version