ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿದ್ಯಾರ್ಥಿಗಳು ಎಂಪಾಸಿಸ್ ಸಂಸ್ಥೆಗೆ ಆಯ್ಕೆಯಾಗಿದ್ದಾರೆ.ಎಸ್‌ಡಿಎಂ ರೋಟರಿ ವೃತ್ತಿ ಮಾರ್ಗದರ್ಶನ ಮತ್ತು ಮಾನವ ಸಂಪನ್ಮೂಲ ಕೇಂದ್ರ ಆಯೋಜಿಸಿದ್ದ ನೇರ ಸಂದರ್ಶನ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಎಂಪಾಸಿಸ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ವರಿಷ್ಠರಾದ ಶಾಂಭವಿ.ಕೆ ನೇರ ಸಂದರ್ಶನ ಪ್ರಕ್ರಿಯೆ ನಡೆಸಿಕೊಟ್ಟರು.ಸಂದರ್ಶನಕ್ಕೆ ೧೭೪ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳಾದ ನೇಮಕಾತಿ ಪರೀಕ್ಷೆ, ಗುಂಪು ಚರ್ಚೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾದ ೨೮ ವಿದ್ಯಾರ್ಥಿಗಳು ಎಂಪಾಸಿಸ್ ಸಂಸ್ಥೆಗೆ ಆಯ್ಕೆ ಆಗಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ ಕುಮಾರ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಡಾ. ನಾಗರಾಜ ಪೂಜಾರಿ ಮತ್ತು ಹರೀಶ್ ಶೆಟ್ಟಿಯವರ ತಂಡ ನೇಮಕಾತಿ ಪ್ರಕ್ರಿಯೆ ಸಂಘಟಿಸಿ ನಿರ್ವಹಣೆ ಮಾಡಿದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಅಂತಿಮ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಇನ್‌ಫೋಸಿಸ್, ಸಾಪ್, ಸಾಫ್ಟ್‌ವೇರ್, ಎಂಪಾಸಿಸ್, ಕೋಟಕ್ ಲೈಫ್,ಪ್ರಾಪ್,ಸೊಸೈಟಿ ಜನರಲ್ ಮತ್ತು ಐಸಿಐಸಿ ಬ್ಯಾಂಕ್‌ಗಳಿಗೆ ಆಯ್ಕೆಯಾಗಿದ್ದಾರೆ.