Site icon Suddi Belthangady

ಜೆಸಿಐ ಉಜಿರೆಯ ಪದಗ್ರಹಣ ಸಮಾರಂಭ

ಉಜಿರೆ: ಜೆಸಿಐ ಉಜಿರೆ ಅಧ್ಯಕ್ಷರಾಗಿ Jc ಪ್ರವೀಣ ಡಿ ಏಪ್ರಿಲ್ 13 ರಂದು ಎಸ್.ಡಿ.ಎಮ್ CBSE ಶಾಲೆಯಲ್ಲಿ ಅಧಿಕಾರ ಸ್ವೀಕರಿಸಿದರು.

ಎಸ್.ಡಿ.ಎಮ್ ಕಾಲೇಜಿನ ಉಪನ್ಯಾಸಕ ಪ್ರವೀಣ.ಡಿ ನಿರ್ಗಮನ ಅಧ್ಯಕ್ಷರಾದ Jc HGF ದೀಕ್ಷಿತ್ ರೈ ಇವರಿಂದ ಪದಪ್ರದಾನಗೊಂಡರು.ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತರಬೇತುಗಾರರಾದ ಶ್ರೀ Jc HGF Dr.ಟಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ನಿರಂತರ ಪ್ರಯತ್ನ ಮತ್ತು ಕ್ರಿಯಾಶೀಲತೆಯಿಂದ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಬಹುದು.ಜೆಸಿಐನಿಂದ ತರಬೇತಿ ಪಡೆದವರು ಸಮಾಜಮುಖಿಯಾಗಿ ಬೆಳೆದು ಶ್ರೇಷ್ಠ ಸ್ಥಾನಮಾನವನ್ನು ಪಡೆಯಲು ಸಾಧ್ಯ ಎಂದು ಹೇಳುತ್ತಾ ಜೂನಿಯರ್ ಜೆಸಿಯನ್ನು ಮುನ್ನಡೆಸುವ ಬಗ್ಗೆ ಮಾಹಿತಿಯನ್ನು ನೀಡಿ ನೂತನ ಅಧ್ಯಕ್ಷರ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿ ಶುಭ ಹಾರೈಸಿದರು.ಘಟಕದ ಪೂರ್ವಧ್ಯಕ್ಷರಾದ Jc ಸಂಪತ್ ಕುಮಾರ್ ಜೈನ್ ಮುಖ್ಯ ಅತಿಥಿಗಳ ಪರಿಚಯವನ್ನು ಸಭೆಗೆ ಮಂಡಿಸಿದರು.

ಘಟಕದ ಪೂರ್ವಧ್ಯಕ್ಷರಾದ JC ಮನಮೋಹನ್ ನಾಯಕ್ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ Jc HGF Dr. ನವೀನ್ ಕುಮಾರ್ ಜೈನ್ ಇವರನ್ನು ಪೂರ್ವಧ್ಯಕ್ಷರ ಸಾಲಿಗೆ ಸೇರ್ಪಡೆಗೊಳಿಸಿದರು.

ಜೆಸಿಐ ಭಾರತದ ವಲಯ XV ರ ವಲಯ ಉಪಾಧ್ಯಕ್ಷರಾದ Jc ಭರತ್ ಶೆಟ್ಟಿ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಿ, ಘಟಕಕ್ಕೆ ಸೇರ್ಪಡೆಗೊಂಡ ನೂತನ ಸದಸ್ಯರುಗಳಾದ ಶ್ರೀ ಶಶಾಂಕ್ ಬಿ ಎಸ್ ಹಾಗೂ ಶ್ರೀಮತಿ ಸಂಗೀತ ಬಿ ಎಸ್ ಇವರಿಗೆ ಪ್ರಮಾಣ ವಚನ ಬೋದಿಸಿದರು.
ನೂತನ ಸದಸ್ಯರ ಪರಿಚಯವನ್ನು ಜೆ ಸಿ ಸಚಿನ್ ಹೆಬ್ಬಾರ್ ಹಾಗೂ ವಲಯ XV ರ ವಲಯ ಉಪಾಧ್ಯಕ್ಷರಾದ Jc ಭರತ್ ಶೆಟ್ಟಿ ಅವರ ಪರಿಚಯವನ್ನು Jc ಪ್ರಸಾದ್ ಕುಮಾರ್ ಸಭೆಯ ಮುಂದಿಟ್ಟರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್ ಕಾಲೇಜು ಉಜಿರೆ, ಇದರ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ Jc HGF Dr. ಬಿ ಏ ಕುಮಾರ್ ಹೆಗ್ಡೆ ಇವರನ್ನು ಜೆಸಿಐ ಉಜಿರೆ ವತಿಯಿಂದ ಸನ್ಮಾನಿಸಲಾಯಿತು. ನಂತರ ಮಾತನಾಡಿದ Dr. ಬಿ ಏ ಕುಮಾರ್ ಹೆಗ್ಡೆ ನಮಗಾಗಿ ಜೆಸಿಯೋ? ಜೆಸಿಗಾಗಿ ನಾವೋ? ಎಂಬ ಪ್ರಶ್ನೆಗೆ ಉತ್ತರ ಖಂಡಿತವಾಗಿಯೂ ನಮಗಾಗಿ ಜೇಸಿ ಎಂದು ಸಭೆಗೆ ಸಾರಿ ಹೇಳಿದರು ಹಾಗೂ ಜೆಸಿಐ ನಿಂದ ತಮ್ಮಲ್ಲಿ ಆದ ವ್ಯಕ್ತಿತ್ವ ವಿಕಸನದ ಪ್ರಯೋಜನಗಳನ್ನು ಮೇಲುಕು ಹಾಕಿದರು. ಇವರ ಪರಿಚಯವನ್ನು ಪೂರ್ವ ಅಧ್ಯಕ್ಷರಾದ Jc ಸೋಮಶೇಖರ್ ಶೆಟ್ಟಿ ಪರಿಚಯಿಸಿದರು.

ನೂತನ ಕಾರ್ಯದರ್ಶಿ Jc ನಿಖಿತ್ ಜೈನ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

ಜೆಸಿಐ ಉಜಿರೆ ಪೂರ್ವಧ್ಯಕ್ಷರುಗಳು ಸದಸ್ಯರುಗಳು ಮತ್ತು ಜೆಸಿಐನ ಹಿತೈಷಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.

Exit mobile version