ವೇಣೂರು, ಎ. ೧೩: ಎನ್ಎಸ್ಎಸ್ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸ್ವಚ್ಛತೆ, ಬಾಂಧವ್ಯ, ಸ್ವಯಂಪರಿಪಾಲನೆ ಮುಂತಾದ ಗುಣಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಯು. ನಾರಾಯಣ ಭಟ್ ಕೇಳಗುತ್ತು ಹೇಳಿದರು.ಕಾಶಿಪಟ್ಣ ಕೇಳ ದ.ಕ.ಜಿ.ಪಂ. ಹಿರಿಯ ಪಾಥಮಿಕ ಶಾಲೆಯಲ್ಲಿ ನಡೆದ ನಾರಾವಿ ಸಂತ ಅಂತೋನಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ೨೦೨೨-೨೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ವಂ| ಡಾ.ಆಲ್ವಿನ್ ಸೆರಾವೋ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು.ಕೇಳದಪೇಟೆ ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಪ್ರಶಾಂತ್ ಎ., ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್ ಮಜಲಡ್ಡ, ಹರೀಶ್ ಗೊಲಿ ಕುಕ್ಕಾಜೆ, ಸುಭಾಶ್ ಶೆಟ್ಟಿ ಹೊಗೆದಿಡ್ಡು, ನಿಕಟಪೂರ್ವ ಯೋಜನಾಧಿಕಾರಿ ಅವಿಲ್ ಮೋರಾಸ್, ಉಪನ್ಯಾಸಕ ಪ್ರದೀಪ್ ಬಿ., ಕುಮಾರಿ ಅಶ್ವಿತಾ ಸೆರಾವೋ, ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಸುಹಾಸ್ ಹೆಗ್ಸೆ, ನವ್ಯಶ್ರೀ ಉಪಸ್ಥಿತರಿದ್ದರು.
ಶಿಬಿರದ ಯೋಜನಾಧಿಕಾರಿ ದಿನೇಶ್ ಬಿ.ಕೆ. ಸ್ವಾಗತಿಸಿದರು.ಸಹಶಿಬಿರಾಧಿಕಾರಿ ಅವಿನಾಶ್ ಲೋಬೋ ವಂದಿಸಿದರು.ಉಪನ್ಯಾಸಕ ಸಂತೋಷ್ ನಿರೂಪಿಸಿದರು.