ಗರ್ಡಾಡಿ: ಗರ್ಡಾಡಿ ಗ್ರಾಮದ ಗುಂಡದ ಬಸ್ತಿ ಮನೆಯ ತೋಮಸ್ ಫೆರ್ನಾಂಡಿಸ್ ರವರ ಪುತ್ರ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ (45 ವ) ಎ.12ರಂದು ನಿಧನರಾಗಿದ್ದಾರೆ. ಮೃತರು ಜೇನು ಕ್ರಷಿಕರಾಗಿದ್ದು ಎ.12ರಂದು ತೋಟಕ್ಕೆ ಹೋದವರು ವಾಪಸಾಗಿಲ್ಲ ಎಂದು ಹುಡುಕಿಕೊಂಡು ಹೋಗುವಾಗ ತೋಟದಲ್ಲಿ ಬಿದ್ದುಕೊಂಡಿದ್ದು, ಅವರು ಅಸೌಖ್ಯದಿಂದ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಪತ್ನಿ ವನಿತಾ ವಿದೇಶದಲ್ಲಿದ್ದು, ಪುತ್ರಿ ರೀಶಲ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತಿಮ ಕ್ರಿಯೆ ಇಂದು ಗರ್ಡಾಡಿ ಚರ್ಚ್ ನಲ್ಲಿ ನಡೆಯಲಿದೆ.