Site icon Suddi Belthangady

ಉಜಿರೆ ಶ್ರೀ ಧ.ಮ ಪಿಜಿ ಸೆಂಟರ್ ನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಮಾನಸಿಕ ಸಮಸ್ಯೆ ಇರುವವರನ್ನು ಸಮಾನರಾಗಿ ಕಾಣಬೇಕು: ಡಾ.ಅನಿಲ್ ಕಾಕುಂಜೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿ ಜಿ ಸೆಂಟರ್ ನಲ್ಲಿ ‘ಸಾಮಾಜಿಕ ಕಾಳಜಿಯ ಉದ್ದೇಶದಲ್ಲಿ ಮನಶಾಸ್ತ್ರಜ್ಞರ ಪಾತ್ರ’ ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಎ.12ರಂದು ಜರಗಿತು.

ಯೆನೆಪೋಯ ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಕಾಕುಂಜೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ವಹಿಸಿದ್ದರು.ಕಾಲೇಜಿನ ಡೀನ್ ಡಾ.ವಿಶ್ವನಾಥ.ಪಿ, ಬೆಂಗಳೂರಿನ ಮುಕ್ತ ಪೌಂಡೇಶನ್ ಸಂಸ್ಥಾಪಕ ನಿರ್ದೇಶಕಿ ಡಾ.ಅಶ್ವಿನಿ ಎನ್.ವಿ ಉಪಸ್ಥಿತರಿದ್ದರು.

ಅತಿಥಿಗಳು ಕಾರ್ಯಕ್ರಮದ ಲೋಗೋ ಹಾಗೂ ಮೆಗಾ ಮೈಂಡ್ ಎಂಬ ಪುಸ್ತಕ ಬಿಡುಗಡೆಗೊಳಿಸಿದರು.
ದೇಶದ ನಾನಾ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಿಂದ ನೋಂದಾಯಿತ 80 ಮಂದಿ ಕಾರ್ಯಕ್ರಮವನ್ನು ಪ್ರತಿನಿಧಿಸಿದ್ದರು.ಹಾಗೂ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕವು ಆಯೋಜಿಸಲಾಗಿದ್ದು ಒಟ್ಟು 200 ಕ್ಕಿಂತ ಅಧಿಕ ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥೆ ವಂದನಾ ಜೈನ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಡಾ.ಮಹೇಶ್ ಬಾಬು.ಎನ್ ವಂದಿಸಿದರು.ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version